ಕಾಸರಗೋಡು: ಜಿಲ್ಲೆಯ ವಿವಿಧೆಡೆ ಇಂದಿನಿಂದ ಆವಾಝ್ ಎನ್ರೋಲ್ ಮೆಂಟ್ ಸ್ಪೆಷಲ್ ಡ್ರೈವ್ ಕಾರ್ಯಕ್ರಮ ನಡೆಯಲಿದೆ.
ಇತರ ರಾಜ್ಯಗಳ ಕಾರ್ಮಿಕರ ಚಿಕಿತ್ಸೆಗೆ ರಾಜ್ಯ ಸರಕಾರ ಅನುಷ್ಠಾನಗೊಳಿಸಿರುವ ಉಚಿತ ವಿಮಾ ಯೋಜನೆ ಆವಾಝ್‍ಗೆ ಸದಸ್ಯತನ ನಡೆಸುವ ಉದ್ದೇಶದಿಂದ ಈ ಕಾರ್ಯ ಜರುಗಲಿದೆ.
ಇಂದು ಮಧ್ಯಾಹ್ನ 2 ಗಂಟೆಗೆ ಚೆರ್ಕಳದಲ್ಲಿ ಮತ್ತು ಕಾಸರಗೋಡಿನಲ್ಲಿ, 4ರಂದು ಮಧ್ಯಾಹ್ನ 2 ಗಂಟೆಗೆ ಚೆರ್ಕಳ ಮತ್ತು ತಾಯಲಂಗಾಡಿಯಲ್ಲಿ, 5ರಂದು ಬೆಳಗ್ಗೆ 10 ಗಂಟೆಗೆ ಬಟ್ಟಿಪದವು ಸ್ಟೀಲ್ ಫ್ಯಾಕ್ಟರಿಯಲ್ಲಿ, ಮಧ್ಯಾಹ್ನ ಒಂದು ಗಂಟೆಗೆ ಉಪ್ಪಳ ಪೇಟೆಯಲ್ಲಿ, 7ರಂದು ಮಧ್ಯಾಹ್ನ ಒಂದು ಗಂಟೆಗೆ ಬೇಕಲ ಜಂಕ್ಷನ್ ನಲ್ಲಿ, 8ರಂದು ಮಧ್ಯಾಹ್ನ ಒಂದು ಗಂಟೆಗೆ ಚಟ್ಟಂಚಾಲ್ ಇಂಡಸ್ಟ್ರೀಯಲ್ ಏರಿಯಾದಲ್ಲಿ ಮತ್ತು ಕುಣಿಯದಲ್ಲಿ, 9ರಂದು ಮಧ್ಯಾಹ್ನ ಒಂದು ಗಂಟೆಗೆ ಕಾಂಞಂಗಾಡ್ ನಯಾಬಝಾರ್ ಮತ್ತು ಉದುಮಾದಲ್ಲಿ ಡ್ರೈವ್ ನಡೆಯಲಿದೆ.
2018 ನ.29 ರಿಂದ ಡಿ.5 ವರೆಗೆ ನಡೆದ ಪ್ರಥಮ ಹಂತದ ಸ್ಪೆಷಲ್ ಡ್ರೈವ್‍ನಲ್ಲಿ 1967 ಕಾರ್ಮಿಕರನ್ನು ಆವಾಝ್ ಯೋಜನೆಯಲ್ಲಿ ಎನ್ರೋಲ್ ಮಾಡಲಾಗಿದೆ. ಜಿಲ್ಲೆಯಲ್ಲಿ ಆವಾಝ್ ಯೋಜನೆಯಲ್ಲಿ 11271 ಕಾರ್ಮಿಕರನ್ನು ಈಗಾಗಲೇ ಸದಸ್ಯರನ್ನಾಗಿಸಲಾಗಿದೆ. ಯೋಜನೆಯಲ್ಲಿ ಸದಸ್ಯರಾದವರಿಗೆ ಅಪಘಾತ ಮರಣ ಸಂ`Àವಿಸಿದರೆ ವಿಮಾ ಮೊಬಲಗು ರೂಪದಲ್ಲಿ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ವರ್ಷಕ್ಕೆ 15 ಸಾವಿರ ರೂ. ಮೌಲ್ಯದ ಚಿಕಿತ್ಸೆ ಉಚಿತ ರೂಪದಲ್ಲಿ ಲಭಿಸಲಿದೆ.
ಕಾಸರಗೋಡು ಜನರಲ್ ಆಸ್ಪತ್ರೆ, ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಆವಾಝ್ ಕೌಂಟರ್ ಈ ನಿಟ್ಟಿನಲ್ಲಿ ತೆರೆಯಲಾಗಿದೆ. ಇತರ ರಾಜ್ಯಗಳ ಕಾರ್ಮಿಕರನ್ನು ಕಾಯಕದಲ್ಲಿ ತೊಡಗಿಸಿಕೊಳ್ಳುವ ಮಾಲೀಕರನ್ನು ಇವರನ್ನು ಈ ಯೋಜನೆಯ ಸದಸ್ಯರನ್ನಾಗಿಸುವಲ್ಲಿ ಮುತುವರ್ಜಿ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದರು.