ಮಂಜೇಶ್ವರ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ನಡೆಸಲಾಗುತ್ತಿರುವ ಗೋಶಾಲೆಗೆ ವರ್ಕಾಡಿಯ ಸಂಘ ಪರಿವಾರದ ಕಾರ್ಯಕರ್ತರು ಭಾನುವಾರ ಬೈಹುಲ್ಲು ಸಂಗ್ರಹಿಸಿ ವಿತರಿಸಿದರು.
ಕಾರ್ಯಕರ್ತರಾದ ಸುನಿಲ್, ಜೀವನ್, ದೀಪಕ್ ರೈ, ಅಶೋಕ್.ಬಿ, ಶುಭಕರ,ವಿಷ್ಣುಪ್ರಸಾದ್ ನಾಯಕ್ ಅವರನ್ನೊಳಗೊಂಡ ತಂಡವು ಬೈಹುಲ್ಲು ಸಂಗ್ರಹಿಸಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಕಾಮಧೇನು ಗೋಶಾಲೆಗೆ ಸಮರ್ಪಿಸಿ ಗೋಸೇವೆ ಮೆರೆದಿದ್ದು ಅವರೆಲ್ಲರಿಗೂ ಗೋಮಾತೆಯ ಅನುಗ್ರಹ ಸದಾ ಇರಲಿ ಎಂದು ಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಹಾರೈಸಿದರು.