ಮುಳ್ಳೇರಿಯ: ಶುದ್ಧಮನಸ್ಸಿನಿಂದ ತೊಡಗಿಸಿಕೊಳ್ಳುವುದೇ ಮಹತ್ತ್ ಸೇವೆ. ನಮ್ಮ ಸಂಸ್ಕಾರವು ಇಂದು ಹೈಟೆಕ್‍ನಿಂದ ಬದಲಾಗುತ್ತಿದೆ. ಜನ್ಮಭೂಮಿ ಮತ್ತು ತಾಯಿಯನ್ನು ಮರೆತರೆ ನಮಗೆ ಒಳಿತಿಲ್ಲ. ಭಾವನೆಗಳಲ್ಲಿ ಹಿಂದೆ ಇರುವವರನ್ನು ಮುಂದೆ ತರಬೇಕು ಆಗ ದೇಶ ಬೆಳಗುತ್ತದೆ. ಆಚಾರ ಅನುಷ್ಠಾನಗಳನ್ನು ಉಳಿಸಿಕೊಳ್ಳುವಲ್ಲಿ ತಾಯಂದಿರ ಪಾತ್ರ ಮಹತ್ತರ ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಧಾರ್ಮಿಕ ಭಾಷಣದಲ್ಲಿ ಹೇಳಿದರು.
ಅವರು ಚೊಟ್ಟೆ ಕುಂಡಂಗುಳಿ ಶ್ರೀ ದುರ್ಗಾದೇವಿ ದೇವರ ಮನೆಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಭಾನುವಾರ ಅವರು ಧಾರ್ಮಿಕ ಭಾಷಣ ಮಾಡಿದರು.
ಕುಲಗುರು ರಾಮಕೃಷ್ಣ ರಾವ್ ಲಾಡ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ಇರಿಯ ಕೃಷ್ಣದಾಸ ತಂತ್ರಿ ಆಶೀರ್ವಚನ ನೀಡಿದರು. ಗೌರವ ಅತಿಥಿಗಳಾಗಿ ಪುರೋಹಿತರಾದ ರಾಧಾಕೃಷ್ಣ ಹಡ್ಲುಗದ್ದೆ, ಶಿಲ್ಪಿ ಪ್ರಕಾಶ್ ಕಾರ್ಕಳ, ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರನ್, ಸದಸ್ಯ ಚಂದು ತಾಯತ್, ಮೋಹನನ್ ನಾಯರ್ ಚೊಟ್ಟೆ, ಗಿರಿಧರ ರಾವ್ ಹಿತ್ಲುಗದ್ದೆ ದೇವರಮನೆ, ರಾಘವೇಂದ್ರ ರಾವ್ ಹುಣ್ಸೆಡ್ಕ ವಾಗ್ಮಾನ್, ಆಡಳಿತೆ ಸಮಿತಿ ಅಧ್ಯಕ್ಷ ಹರೀಶ್.ಎಂ.ರಾವ್, ಯಕ್ಷಗಾನ ಕಲಾವಿದ ನಾಗೋಜಿ ರಾವ್ ನಡುಬಯಲು, ಶಾರದಾ ಗೋಪಾಲ್ ರಾವ್ ಕಾಪಿಹಿತ್ಲು, ಗೌರವ ಸಲಹೆಗಾರ ಕೇಶವ ರಾವ್ ಅಂಬುಕುಂಜೆ, ಕೋಶಾಧಿಕಾರಿ ಜಯಂತ.ಎಂ, ಉಪಾಧ್ಯಕ್ಷ ಭಾಸ್ಕರ ರಾವ್ ಕಾರ್ಕಳ, ಸುರೇಶ್.ಕೆ ಮಂಗಳೂರು, ಪ್ರಧಾನ ಕಾರ್ಯದರ್ಶಿ ಮಾಧವ ರಾವ್ ಕಾಸರಗೋಡು, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕೆ.ಬಿ.ಕೀರ್ತನ್ ಕುಮಾರ್ ಕಾರ್ಕಳ, ಕಾರ್ಯದರ್ಶಿ ರಾಜ್ ಕುಮಾರ್ ಭಾಗವಹಿಸಿದ್ದರು. ಆಡಳಿತೆ ಸಮಿತಿ ಕಾರ್ಯದರ್ಶಿ ಅಶೋಕ್ ರಾವ್ ಸ್ವಾಗತಿಸಿ, ಪ್ರಕಾಶ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ಗೋಪಾಲಕೃಷ್ಣ ಕುಂಪಳ ವಂದಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮೆ ನಡೆಯಿತು.