HEALTH TIPS

ಗಲಭೆ ಹತ್ತಿಕ್ಕಲು ಶತ ಪ್ರಯತ್ನ -ಉಪ್ಪಳ ವ್ಯಾಪಾರಿ ಭವನದಲ್ಲಿ ನಡೆದ ಶಾಂತಿ ಸಭೆ ನಿರ್ಣಯ-ಬಿಜೆಪಿ ಗೈರು


         ಉಪ್ಪಳ: ಹರತಾಳದ ದಿನದಂದು ಮಂಜೇಶ್ವರ ವ್ಯಾಪ್ತಿಯಲ್ಲಿ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ  ಪೆÇಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಉಪ್ಪಳ ವ್ಯಾಪಾರ ಭವನದಲ್ಲಿ ಸೋಮವಾರ ಶಾಂತಿಸಭೆ ನಡೆಯಿತು.
        ಕಾಸರಗೋಡು ಡಿವೈಎಸ್‍ಪಿ ಪ್ರದೀಪ್, ವೆಳ್ಳರಿಕುಂಡು ಸಿಐ ಸುನಿಲ್‍ಕುಮಾರ್‍ಯವರ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ  ಕೊಂಡವೂರು ಶ್ರಿ ಯೋಗಾನಂದ ಸರಸ್ವತಿ ಸ್ವಾಮೀಜಿ, ಜನಾಬ್ ಅತ್ತಾವುಲ್ಲಾ ತಂಙಳ್,  ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ,ಅಶ್ರಫ್. ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ  ಹರ್ಷಾದ್ ವರ್ಕಾಡಿ, ಫರೀದಾ ಝಕೀರ್, ಪಂಚಾಯತು ಅಧ್ಯಕ್ಷರಾದ ಶಾಹುಲ್ ಹಮೀದ್, ಶಂಷಾದ್ ಶಕೂರ್, ಅಬ್ದುಲ್ ಮಜೀದ್, ಮಮತಾ ದಿವಾಕರ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಬಿ.ವಿ.ರಾಜನ್, ಎಂ.ಅಬ್ಬಾಸ್, ಅಬ್ದುಲ್ ರಝಾಕ್ ಚಿಪ್ಪಾರ್, ಉಮ್ಮರ್ ಬೋರ್ಕಳ, ಗೋಲ್ಡನ್ ರಹ್ಮಾನ್, ತಾಜುದ್ದಿನ್, ಜಯಪ್ರಕಾಶ್, ಮೊಹಮ್ಮದ್ ರಫಿಕ್ ಮುಂತಾದವರು ಮಾತನಾಡಿದರು.
       ನಾಡಿನಲ್ಲಿ ಶಾಂತಿ ಸುವ್ಯವಸ್ಥೆ ನೆಲೆಗೊಳ್ಳಲು ಎಲ್ಲರೂ ಒಗ್ಗಟ್ಟಾಗಿ  ಕಾರ್ಯಪ್ರವರ್ತಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಮಂಜೇಶ್ವರ ಎಸ್,ಐ,ಶಾಜಿ ಸ್ವಾಗತಿಸಿ ವಂದಿಸಿದರು. ಪ್ರಸ್ತುತು ಶಾಂತಿ ಸಭೆಯನ್ನು ಬಿಜೆಪಿ ಬಹಿಸ್ಕರಿಸಿದ್ದು, ಅಮಾಯಕರನ್ನು ಬಂಧಿಸಿ, ಕಿರುಕುಳ ನೀಡುವ ಪೆÇಲೀಸರು ನಡೆಸುವ ಶಾಂತಿ ಸಭೆ  ಪ್ರಹಸನವೆಂದು ಬಿಜೆಪಿ ನೇತಾರರು ಆರೋಪಿಸಿದ್ದಾರೆ.
     ಹಲವು ನೇತಾರರು ಪೊಲೀಸರ ಭಾಗದಿಂದ ವೈಪಲ್ಯವಾಗಿರುವುದಾಗಿ ಆರೋಪಿಸಿದರೆ, ಇನ್ನು ಕೆಲವು ನೇತಾರರು ಹರತಾಳಕ್ಕೆ ಆಹ್ವಾನ ನೀಡಿದವರ ನೇತಾರರಿಂದಲೇ ವೈಪಲ್ಯವಾಗಿರುವುದಾಗಿ ಆರೋಪಿಸಿದ್ದಾರೆ. ಗಡಿ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಮಂಜೇಶ್ವರದ ಕೆಲವೊಂದು ಪ್ರದೇಶಗಳಲ್ಲಿ ಇನ್ನೂ ಎರಡು ಠಾಣೆಗಳನ್ನು ಸ್ಥಾಪಿಸುವಂತೆ ಸಭೆಯಲ್ಲಿ ಒತ್ತಾಯ ಕೇಳಿ ಬಂದಿದೆ. ಅಕ್ರಮಣ ಗೈದ ಆರೊಪಿಗಳನ್ನು ಯಾವ ಒತ್ತಡಕ್ಕೂ ಮಣಿಯದೆ ಬಂಧಿಸುವುದಾಗಿ ಡಿ ವೈ ಎಸ್ಪಿ ಭರವಸೆ ನೀಡಿದರು. ತಪ್ಪೆಸೆಗಿದವರ ಬಗ್ಗೆ ಸಾರ್ವಜನಿಕರು ಕೂಡಾ ಪೊಲೀಸರೊಂದಿಗೆ ಸಹಕರಿಸಿದರೆ ಊರಲ್ಲಿ ಶಾಂತಿಯನ್ನು ಸ್ಥಾಪಿಸಬಹುದಾಗಿ ಡಿ ವೈ ಎಸ್ಪಿ ಹೇಳಿದರು. ಅಪರಾಧಿ ಎಂಬುದಾಗಿ ರುಜುವಾತಾದರೆ ಆತನನ್ನು ಬಿಡಿಸಲು ರಾಜಕೀಯ ನೇತಾರರು ಮುಂದಾಗಬಾರದಾಗಿ ಡಿ ವೈ ಎಸ್ಪಿ ವಿನಂತಿಸಿಕೊಂಡರು.
      ಆರಾಧನಾಲಯಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ಮಾತ್ರವೇ ಧ್ವಜ ತೋರಣಗಳನ್ನು ಸ್ಥಾಪಿಸಬಹುದಾಗಿದೆ. ಉತ್ಸವ ಅಥವಾ ಇತರ ಯಾವುದೇ ಕಾರ್ಯಕ್ರಮಗಳು ನಡೆಯುವ ಆರಾಧನಾಯಗಳ ಹತ್ತಿರ ಇನ್ನೊಂದು ಆರಾಧನಾಲಯವಿದ್ದರೆ ಅಂತಹ ಆರಾಧನಾಲಯಗಳಿಗೆ ತೊಂದರೆಗಳಾಗುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಬಾರದು, ಕಾರ್ಯಕ್ರಮದಲ್ಲಿ ಭಾವಹಿಸುವವರಿಗೆ  ಉಪಯೋಗವಾಗುವ ರೀತಿಯಲ್ಲಿ ಮಾತ್ರವೇ ಟ್ಯೂಬ್ ಲೈಟ್ ಗಳನ್ನು ಹಾಕಬಹುದಾಗಿದೆ. ಧ್ವಜ ತೋರಣಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕುವುದಿದ್ದರೆ ಮುಂಚಿತವಾಗಿ ಪೊಲೀಸ್ ಇಲಾಖೆಯ ಅನುಮತಿಯನ್ನು ಪಡೆಯ ಬೇಕಾಗಿದೆ. ಕಾರ್ಯಕ್ರಮದ ಒಂದು ದಿನ ಮೊದಲು ಅಲಂಕರಿಸಿ ಕಾರ್ಯಕ್ರಮದ ಮರುದಿನವೇ ಅಲಂಕಾರಗಳನ್ನು ತೆರವುಗೊಳಿಸಬೇಕಾಗಿದೆ. ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಆ ಪ್ರದೇಶದಲ್ಲಿ ಶಾಂತಿ ಸಮಾಧಾನವನ್ನು ಕಾಪಾಡಿಕೊಳ್ಳಬೇಕಾಗಿದೆ. ಮೆರವಣಿಗೆ, ಜಾಥಾ ಹಮ್ಮಿಕೊಳ್ಳುವಾಗ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿ ಕೊಳ್ಳಬೇಕು ಮೊದಲಾದ ತೀರ್ಮಾನಗಳನ್ನು ಜ್ಯಾರಿ ಮಾಡುವಂತೆ ನೋಟೀಸು ಜ್ಯಾರಿಗೊಳಿಸುವುದಾಗಿ ಡಿ ವೈ ಎಸ್ಪಿ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries