ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಕಿರು ಷಷ್ಠಿ ಮಹೋತ್ಸವ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಉಪಾಸನಾ ಕಾರ್ಯಕ್ರಮದ ಅಂಗವಾಗಿ ಮಹಾವಿಷ್ಣು ಭಜನಾ ಸಂಘ ಮಾನ್ಯ, ಶ್ರೀ ಮಹಾದೇವ ಭಜನಾ ಸಂಘ ಪೆರುದಡಿ ಪಣತ್ತಡಿ ಇವರಿಂದ ಭಜನಾ ಸೇವೆ ಜರಗಿತು. ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ನಿರೂಪಿಸಿದರು. ಸೇವಾ ರೂಪದಲ್ಲಿರುವ ತುಲಾಭಾರ ಸೇವೆಯು ಈ ಸಂದರ್ಭದಲ್ಲಿ ಜರಗಿತು. ಕ್ಷೇತ್ರ ಅರ್ಚಕರಾದ ಅನಂತ ಪದ್ಮನಾಭ ಮಯ್ಯ ವೈದಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಸೀತಾರಾಮ ಬಳ್ಳುಳ್ಳಾಯ ಅವರು ಕಾರ್ಯಕ್ರಮ ಸಂಯೋಜನೆ ಮಾಡಿದರು.