ಕಾಸರಗೋಡು: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಸಹಿತ ಹಲವು ನೀತಿಯನ್ನು ಪ್ರತಿಭಟಿಸಿ ವಿವಿಧ ಟ್ರೇಡ್ ಯೂನಿಯನ್‍ಗಳ ಸಂಯುಕ್ತ ಸಂಘಟನೆಯಾದ ಕಾನ್ಪಡರೇಶನ್ ಆಫ್ ಟ್ರಾನ್ಸ್‍ಪೆÇೀರ್ಟ್ ವರ್ಕರ್ಸ್ ಕರೆ ನೀಡಿದ 48 ಗಂಟೆಗಳ ರಾಷ್ಟ್ರೀಯ ಮುಷ್ಕರದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.
ರಾಷ್ಟ್ರೀಯ ಮುಷ್ಕರದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ರಾಜ್ಯ ಸಾರಿಗೆ ಬಸ್‍ಗಳ ಸಹಿತ ಖಾಸಗಿ ಬಸ್‍ಗಳು ರಸ್ತೆಗಿಳಿಯಲಿಲ್ಲ. ಇದರಿಂದಾಗಿ ಬಸ್ ಪ್ರಯಾಣಿಕರು ಸಮಸ್ಯೆಗೆ ತುತ್ತಾದರು. ಆದರೆ ಕೆಲವು ಅಂಗಡಿಗಳು ತೆರೆದು ಕಾರ್ಯಾಚರಿಸಿತು. ಅದೇ ವೇಳೆ ಖಾಸಗಿ ವಾಹನಗಳು ಎಂದಿನಂತೆ ರಸ್ತೆಯಲ್ಲಿ ಓಡಾಡುತ್ತಿದೆ. ಕೆಲವೆಡೆಗಳಲ್ಲಿ ವಾಹನಗಳನ್ನು ತಡೆದರೂ, ನೇತಾರರು ಮಧ್ಯಸ್ಥಿಕೆ ವಹಿಸಿ ವಾಹನಗಳನ್ನು ಸಾಗಲು ಬಿಟ್ಟರು. ಬಲವಂತವಾಗಿ ವಾಹನ ತಡೆ, ಅಂಗಡಿಗಳನ್ನು ಮುಚ್ಚಿಸುವುದಿಲ್ಲ ಎಂದು ಹಿಂದೆಯೇ ನೇತಾರರು ಪ್ರಕಟಿಸಿದ್ದರು.
ರಾಷ್ಟ್ರೀಯ ಮುಷ್ಕರದ ಹಿನ್ನೆಲೆಯಲ್ಲಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದ ಸಹಿ ಮರದಡಿಯಲ್ಲಿ ಸಿಐಟಿಯು, ಐಎನ್‍ಟಿಯುಸಿ, ಎಐಟಿಯುಸಿ, ಎಚ್‍ಎಂಎಸ್, ಯುಟಿಯುಸಿ, ಎಸ್‍ಟಿಯು, ಐಎನ್‍ಎಲ್‍ಟಿ, ಎನ್‍ಎಲ್‍ಯು ಮೊದಲಾದ ಕಾರ್ಮಿಕ ಸಂಘಟನೆಗಳ ಆಶ್ರಯದಲ್ಲಿ ಧರಣಿ ನಡೆಯಿತು. ಧರಣಿಯಲ್ಲಿ ದಾಮೋದರನ್ ಅಧ್ಯಕ್ಷತೆ ವಹಿಸಿದರು. ಕೆ.ರಾಘವನ್, ಟಿ.ಕೆ.ಕೃಷ್ಣನ್, ಬಿಜು ಉಣ್ಣಿತ್ತಾನ್, ಟಿ.ಎ.ಶಾಫಿ, ಒ.ವಿ.ಸುರೇಶ್, ಎ.ಅಹಮ್ಮದ್ ಹಾಜಿ, ಸಿ.ಜಿ.ಟೋನಿ, ಸಿ.ಎಂ.ಎ.ಜಲೀಲ್, ಮುನೀರ್, ಬಿಜು, ಶರೀಫ್, ಮುತ್ತಲಿಬ್ ಪಾರೆಕಟ್ಟೆ, ಸುಬೈರ್ ಮೊದಲಾದವರು ಮಾತನಾಡಿದರು. ಕೆ.`Áಸ್ಕರನ್ ಸ್ವಾಗತಿಸಿದರು. ಮುಷ್ಕರದಂಗವಾಗಿ ಕಾಸರಗೋಡು ನಗರದಲ್ಲಿ ಮುಷ್ಕರ ಬೆಂಬಲಿಗರು ಮೆರವಣಿಗೆ ನಡೆಸಿದರು.
ಸಿಐಟಿಯು, ಐಎನ್‍ಟಿಯುಸಿ, ಎಐಟಿಯುಸಿ, ಎಸ್‍ಟಿಯು, ಯುಟಿಯುಸಿ, ಎಚ್‍ಎಂಎಸ್, ಕೆಟಿಯು, ಸೆವಾ, ಟಿಯುಸಿಐ, ಕೆಟಿಯುಸಿ(ಎಂ), ಐಎನ್‍ಎಲ್‍ಸಿ, ಎನ್‍ಟಿಯುಐ, ಎಚ್‍ಎಂಕೆಪಿ, ಎಐಟಿಯುಐ, ಎನ್‍ಎಲ್‍ಸಿ, ಕೆಟಿಯುಸಿ(ಬಿ), ಕೆಟಿಯುಸಿ(ಜೆ) ಮತ್ತು ಟಿಯುಪಿಸಿ ಇತ್ಯಾದಿ ಕಾರ್ಮಿಕ ಸಂಘಟನೆಗಳ ಸಂಯುಕ್ತ ಒಕ್ಕೂಟವಾದ ಕಾನ್ಪಡರೇಶನ್ ಆಫ್ ಟ್ರಾನ್ಸ್‍ಪೆÇೀರ್ಟ್ ವರ್ಕರ್ಸ್ 48 ಗಂಟೆಗಳ ರಾಷ್ಟ್ರೀಯ ಮುಷ್ಕರಕ್ಕೆ ಕರೆ ನೀಡಿತ್ತು. ಬಿಎಂಎಸ್ ಮತ್ತು ಅದರ ಪೆÇೀಷಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಂಡಿಲ್ಲ.
ತಿರುವನಂತಪುರ-ಮಂಗಳೂರು ರೂಟ್‍ನ ಕೆಎಸ್‍ಆರ್‍ಟಿಸಿ ಬಸ್ ಮಂಗಳವಾರ ಬೆಳಿಗ್ಗೆ ಮಂಗಳೂರಿಗೆ ಸರ್ವೀಸ್ ನಡೆಸಿದೆ. ಕಾಸರಗೋಡು ಮೂಲಕ ಬೆಳಿಗ್ಗೆ ಹಲವು ಸರಕು ವಾಹನಗಳು ಸಂಚರಿಸಿದ್ದರೂ ಹಲವೆಡೆ ಅವುಗಳನ್ನು ಮುಷ್ಕರ ಬೆಂಬಲಿಗರು ತಡೆದರು. ಇದರಿಂದಾಗಿ ಹಲವೆಡೆ ಸರಕು ವಾಹನಗಳ ಸಾಲು ರಸ್ತೆ ಬದಿಯಲ್ಲಿ ಕಂಡು ಬಂತು.
ಕಾಸರಗೋಡು ನಗರದಲ್ಲಿ ಕೆಲವು ವ್ಯಾಪಾರ ಸಂಸ್ಥೆಗಳು ತೆರೆದಿತ್ತು. ಮದ್ದಿನಂಗಡಿಗಳು, ಪೆಟ್ರೋಲ್ ಬಂಕ್‍ಗಳು ಕಾರ್ಯಾಚರಿಸಿತು. ಖಾಸಗಿ ವಾಹನಗಳು ಎಂದಿನಂತೆ ರಸ್ತೆಯಲ್ಲಿ ಕಂಡುಬಂದಿದ್ದು, ಜನಸಂಚಾರ ಕಡಿಮೆಯಾಗಿತ್ತು. ಕಾಸರಗೋಡು ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ, ಬ್ಯಾಂಕ್‍ಗಳಲ್ಲಿ ನೌಕರರ ಹಾಜರಾತಿ ಕಡಿಮೆಯಿತ್ತು.
ರೈಲು ತಡೆ : ಮುಷ್ಕರ ನಿರತರು ಮಂಗಳವಾರ ಬೆಳಿಗ್ಗೆ ಕಾಸರಗೋಡು ರೈಲು ನಿಲ್ದಾಣದಲ್ಲಿ ಚೆನ್ನೈ-ಮಂಗಳೂರು ಮೈಲ್ ರೈಲುಗಾಡಿಯನ್ನು ತಡೆದರು. ಕಾಂಞಂಗಾಡ್, ಚೆರ್ವತ್ತೂರಿನಲ್ಲಿ ಮಲಬಾರ್ ಎಕ್ಸ್‍ಪ್ರೆಸ್ ರೈಲನ್ನು, ಪಯ್ಯನ್ನೂರಿನಲ್ಲಿ ಎಗ್ಮೋರ್ ಎಕ್ಸ್‍ಪ್ರೆಸ್ ರೈಲು ಗಾಡಿಯನ್ನು ತಡೆದರು. ತಿರುವನಂತಪುರ, ಎರ್ನಾಕುಳಂ ಮತ್ತು ಕಲ್ಲಿಕೋಟೆಯಲ್ಲಿ ರೈಲುಗಳನ್ನು ತಡೆಯಲಾಗಿದೆ. ಅದರಿಂದಾಗಿ ರೈಲು ಸೇವೆ ಅಸ್ತವ್ಯಸ್ತಗೊಂಡಿತು. ರೈಲು ತಡೆಯಿಂದಾಗಿ ಹಲವು ರೈಲುಗಳ ಸೇವೆ ಹಲವು ತಾಸುಗಳ ವಿಳಂಬವುಂಟಾಯಿತು. ಇದರಿಂದಾಗಿ ದೀರ್ಘ ದೂರ ರೈಲು ಪ್ರಯಾಣಿಕರು ಇಕ್ಕಟ್ಟಿನಲ್ಲಿ ಸಿಲುಕಿದರು.
ಮುಷ್ಕರ ಶಾಂತಿಯುತ : ಕಾಸರಗೋಡು ಜಿಲ್ಲೆಯಲ್ಲಿ ರಾಷ್ಟ್ರೀಯ ಮುಷ್ಕರ ಶಾಂತಿಯುತವಾಗಿತ್ತು. ಜಿಲ್ಲೆಯಾದ್ಯಂತ ಪೆÇಲೀಸರು ಬಿಗು ಬಂದೋಬಸ್ತು ಏರ್ಪಡಿಸಿದ್ದರು. ನಗರ ಸಹಿತ ವಿವಿಧೆಡೆ ಪೆÇಲೀಸ್ ಪಹರೆ ನಡೆಸಲಾಗುತ್ತಿದೆ.
ಮುಳ್ಳೇರಿಯ ಸಹಿತ ವಿವಿಧೆಡೆ ಮುಷ್ಕರ ನೀರಸ : ಮುಳ್ಳೇರಿಯ ಪೇಟೆಯಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ. ಬಸ್ ಸಂಚಾರ ಬಿಟ್ಟರೆ ಇತರೆಲ್ಲಾ ವಾಹನಗಳು ಸುಗಮವಾಗಿ ಸಂಚಾರ ನಡೆಸಿತು. ಹೊಟೇಲ್‍ಗಳ ಸಹಿತ ಎಲ್ಲಾ ವ್ಯಾಪಾರ ಸಂಸ್ಥೆಗಳು ತೆರೆದು ಕಾರ್ಯಾಚರಿಸಿತು. ಆಟೋರಿಕ್ಷಾ ಮತ್ತಿತರ ಟ್ಯಾಕ್ಸಿ ವಾಹನಗಳು ಸಂಚಾರ ನಡೆಸಿತು. ಇದರಿಂದಾಗಿ ಈ ಭಾಗದ ಜನರಿಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ.
ಮುಳ್ಳೇರಿಯ ಪೇಟೆಯಲ್ಲಿ, ಕಾಸರಗೋಡು ಪೇಟೆಯಲ್ಲಿ ಬಿಎಂಎಸ್ ನೇತೃತ್ವದ ಕಾರ್ಮಿಕರು ಕೆಲಸ ನಿರತರಾಗಿದ್ದಾರೆ. ಆಟೋ ಟ್ಯಾಕ್ಸಿಗಳು ಎಂದಿನಂತೆ ಸಂಚಾರ ನಡೆಸುವುದರಿಂದ ಅಡೂರು, ಕುಂಟಾರು, ಬೆಳ್ಳೂರು, ನೆಟ್ಟಣಿಗೆ, ಕಿನ್ನಿಂಗಾರು ಸಹಿತ ವಿವಿಧ ಭಾಗಗಳಿಗೆ ತೆರಳುವ ಪ್ರಯಾಣಿಕರಿಗೆ ಯಾವುದೇ ತೊಂದರೆ ಉಂಟಾಗಲಿಲ್ಲ. ಬದಿಯಡ್ಕ, ಪೆರ್ಲ ಪೇಟೆಯಲ್ಲೂ ವ್ಯಾಪಾರ ಸಂಸ್ಥೆಗಳು ತೆರೆದುಕೊಂಡಿವೆ. ಆಟೋ ಟ್ಯಾಕ್ಸಿಗಳು ಸಂಚರಿಸುತ್ತಿವೆ. ಇದರಿಂದಾಗಿ ಈ ಭಾಗದ ಜನರಿಗೂ ಸಂಚಾರ ಸಮಸ್ಯೆ ಎದುರಾಗಲಿಲ್ಲ.
ತಲಪಾಡಿ-ಮಂಗಳೂರು ಬಸ್ ಸಂಚಾರ ಸುಗಮ : ತಲಪಾಡಿ-ಮಂಗಳೂರು ಮಧ್ಯೆ ಕರ್ನಾಟಕದ ಖಾಸಗಿ ಬಸ್‍ಗಳು ಎಂದಿನಂತೆ ಸಂಚಾರ ನಡೆಸಿತು. ಇದರಿಂದಾಗಿ ಈ ಪ್ರದೇಶದ ಜನರಿಗೆ ವಿವಿಧ ಅಗತ್ಯಗಳಿಗೆ ಮಂಗಳೂರು ಸಹಿತ ವಿವಿಧೆಡೆಗೆ ಸಂಪರ್ಕಕ್ಕೆ ಅನುಕೂಲವಾಗಿದೆ. ಮಂಜೇಶ್ವರದಲ್ಲಿ ವ್ಯಾಪಾರ ಸಂಸ್ಥೆಗಳು ತೆರೆದಿದದ್ದು ಕೆಲವು ಆಟೋ ರಿಕ್ಷಾಗಳು ಸಂಚಾರ ನಡೆಸಿವೆ. ಕುಂಬಳೆಯಲ್ಲೂ ಬೆರಳೆಣಿಕೆಯ ಆಟೋ ರಿಕ್ಷಾಗಳು ಸಂಚಾರ ನಡೆಸಿತು. ಆದೂರು ಪೇಟೆ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು.