ಕಾಸರಗೋಡು: ಡ್ರಾಪ್ ಔಟ್ ಫ್ರೀ ಕಾಸರಗೋಡು ಯೋಜನೆಯ ಜಿಲ್ಲಾ ಮಟ್ಟದ ಮೋನಿಟರಿಂಗ್ ಸಮಿತಿ ಸಭೆ ಇತ್ತೀಚೆಗೆ ಜರಗಿತು. ಜಿಲ್ಲಾಧಿಕಾರಿ ಅವರ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಣಾಲಯಗಳಿಂದ ಮಕ್ಕಳು ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸುವುದನ್ನು ತಪ್ಪಿಸಲು ಜಾರಿಗೊಳಿಸಲಾದ ಯೋಜನೆ ಡ್ರಾಪ್ಟ್ ಔಟ್ ಫ್ರೀ ಕಾಸರಗೋಡು. ಇಂತಹ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಮತ್ತು ಈ ರೀತಿಯ ಸಮಸ್ಯೆ ಮುಂದೆ ನಡೆಯದಂತೆ ಕ್ರಮಕೈಗೊಳ್ಳಲು ಸಭೆ ನಿರ್ಧರಿಸಿದೆ.
ಚೈಲ್ಡ್ ವೆಲ್ಪೇರ್ ಸಮಿತಿ ಅಧ್ಯಕ್ಷೆ ಮಾಧುರಿ ಎಸ್.ಬೋಸ್, ನ್ಯಾಯವಾದಿ ಮಣಿಯಮ್ಮ, ಮಹಿಳಾ ಶಿಶು ಅಭಿವೃದ್ಧಿ ಅಧಿಕಾರಿ ಡೀನಾ ಭರತನ್, ಶಿಕ್ಷಣ ಉಪನಿರ್ದೇಶಕ ಡಾ.ಗಿರೀಶ್ ಚೋಲಯಿಲ್, ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಪಿ.ಬಿಜು ಮೊದಲಾದವರು ಉಪಸ್ಥಿತರಿದ್ದರು.