ನವದೆಹಲಿ: ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಇದೇ ಮೊದಲ ಬಾರಿಗೆ ಪುರುಷ ತುಕಡಿಗೆ ಮಹಿಳಾ ಅಧಿಕಾರಿ ಸಾರಥ್ಯ ವಹಿಸಲಿದ್ದಾರೆ.
ರಾಜಪಥ ಮಾರ್ಗದಲ್ಲಿ ಇಡೀ ದೇಶದ ಎದುರು ಲೆಪ್ಟಿನೆಂಟ್ ಭಾವನಾ ಕಸ್ತೂರಿ ಆದೇಶದಂತೆ 144 ಯೋಧರು ಪರೇಡ್ ನಡೆಸಲಿದ್ದಾರೆ.
ಹೈದ್ರಾಬಾದ್ ಮೂಲದ ಭಾವನಾ ಕಸ್ತೂರಿ ಎರಡೂವರೆ ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದಾರೆ.
ಸೇನಾ ಮುಖ್ಯಸ್ಥರಿಗೆ ಗೌರವ ಸಲ್ಲಿಸಿ ಅವರ ಎದುರುಗಡೆ ಕಮಾಂಡ್ ನೀಡುವ ಕನಸಿನ ಕ್ಷಣವನ್ನು ಎದುರು ನೋಡುತ್ತಿರುವುದಾಗಿ ಯುವ ಅಧಿಕಾರಿ ಹೇಳಿದ್ದಾರೆ.
ಪರೇಡ್ ವೀಕ್ಷಣೆಗಾಗಿ ಬರುವ ಜನರನ್ನು ನೋಡುವುದಕ್ಕೆ ಕಾತುರವಾಗಿದ್ದು, ತಮ್ಮನ್ನು ನೋಡಿ ಸಹಸ್ರಾರು ಹೆಣ್ಣು ಮಕ್ಕಳು ಸಂತಸಗೊಳ್ಳಲಿದ್ದಾರೆ ಎಂದು ಭಾವನಾ ಕಸ್ತೂರಿ ಸಂತಸ ವ್ಯಕ್ತಪಡಿಸಿದ್ದಾರೆ.