ಕಾಸರಗೋಡು: ವರ್ಕಾಡಿ ಗ್ರಾಮಪಂಚಾಯತ್ ಸಾಕ್ಷರತೆ ಸಮಿತಿ ಸಭೆ ಜರುಗಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಎ.ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಸರಕಾರ ಮತ್ತು ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ಆದೇಶ ಪ್ರಕಾರ ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ಸಂವಿಧಾನ ಸಾಕ್ಷರತಾ ತರಗತಿಗಳನ್ನು ಶೀಘ್ರದಲ್ಲೇ ನಡೆಸಲು ನಿರ್ಧರಿಸಲಾಗಿದೆ. ಈ ಸಂಬಂಧ ವಾರ್ಡ್ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ ಜ.9ರಂದು ಪಂಚಾಯತ್ ಸಭಾಂಗಣದಲ್ಲಿ ತರಬೇತಿ ನಡೆಸಲಾಗುವುದು ಎಂದು ತಿಳಿಸಲಾಯಿತು.
ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ರಹಮತ್ ರಝಾಕ್, ಸದಸ್ಯರಾದ ಸದಾಶಿವ ನಾಯ್ಕ್, ಗೋಪಾಲಕೃಷ್ಣ, ಜಿಲ್ಲಾ ಪ್ರೇರಕ್ ಪರಮೇಶ್ವರ, ಸಾಕ್ಷರತಾ ಅನುಷ್ಠಾನ ಅಧಿಕಾರಿ ಸುಮೇಶ್ ಬಂಗೇರ, ಪಂಚಾಯತ್ ಮಟ್ಟದ ಸಂಪನ್ಮೂಲ ವ್ಯಕ್ತಿ ರಾಧಾಕೃಷ್ಣ ಬಲ್ಲಾಳ್, ಉಸ್ಮಾನ್, ಗ್ರಾಮ ವಿಸ್ತರಣಾ„ಕಾರಿ ಪುರುಷೋತ್ತಮ್, ಪರಿಶಿಷ್ಟ ಜಾತಿ-ಪಂಗಡ ಪ್ರಮೋಟರುಗಳು, ಸಾಕ್ಷರತೆ ಸಮಿತಿ ಸದಸ್ಯರು, ಕುಟುಂಬಶ್ರೀ ಸಿ.ಡಿ.ಎಸ್, ಎ.ಟಿಎಸ್. ಉಪಸ್ಥಿತರಿದ್ದರು.
ಸಾಕ್ಷರತಾ ಸಂಚಾಲಕ ಸುರೇಶ್ ಸ್ವಾಗತಿಸಿದರು. ಪ್ರೇರಕ್ ರವಿಶಂಕರ್ ಟಿ.ಎನ್.ಶೆಟ್ಟಿ ವಂದಿಸಿದರು.