ಕಾಸರಗೋಡು: ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ಮಕರ ಸಂಕ್ರಮಣ ದಿನದಂದು ಶ್ರೀ ದೇವರ ವೈಭವದ ಉತ್ಸವ ನೆರವೇರಿತು.
ಬೆಳಿಗ್ಗೆ ಶ್ರೀ ಕಾಶೀ ಮಠಾಧೀಶ ಶ್ರೀ ಸುಧೀಂದ್ರ ತೀರ್ಥ ಶ್ರೀ ಪಾದಂಗಳವರ ತೃತೀಯ ಪುಣ್ಯ ತಿಥಿ ಆರಾಧನೆ ನಡೆಯಿತು. ರಾತ್ರಿ ಶ್ರೀ ದೇವರಿಗೆ ಪೂಜೆ, ಶ್ರೀ ಗಳ ಭಾವಚಿತ್ರಕ್ಕೆ ಪೂಜೆ, ಶ್ರೀ ದೇವರ ಬಾಂಡಿ(ಬಂಡಿ) ಉತ್ಸವ, ಅಷ್ಟಾವಧಾನ, ಶ್ರೀ ಗುರುಗಳ ಭಾವಚಿತ್ರದ ಉತ್ಸವ ನಡೆದು ಪ್ರಸಾದ ವಿತರಣೆ ಮಾಡಲಾಯಿತು. ಶ್ರೀಗುರುಗಳ ಗುಣಗಾನವನ್ನೂ ಈ ವೇಳೆ ಆಲಿಸಲಾಯಿತು.