ಕಾಸರಗೋಡು: ರಾಜಧಾನಿ ರೈಲು ಗಾಡಿಗೆ ಕಾಸರಗೋಡು ನಿಲ್ದಾಣದಲ್ಲಿ ನಿಲುಗಡೆ ನೀಡಬೇಕೆಂಬ ಜಿಲ್ಲೆಯ ಜನರ ಸುಧೀರ್ಘ ಕಾಲದ ಬೇಡಿಕೆಗೆ ಕೊನೆಗೂ ಹಸಿರು ನಿಶಾನೆ ನೀಡಲಾಗಿದ್ದು, ಸೋಮವಾರ ಸಂಜೆಯ ವೇಳೆಗೆ ನಿಲುಗಡೆಗೆಸೂಚನೆ ನೀಡಲಾಗಿದೆ ಎಂಬ ನಿರ್ದೇಶನ ಅಧಿಕೃತರಿಗೆ ರವಾನೆಯಾಗಿದೆ.
12432 ನಿಝಾಮುದ್ದೀನ್- ತಿರುವನಂತಪುರ ರಾಜಧಾನಿ ಎಕ್ಸ್‍ಪ್ರೆಸ್ಸ್, 12431 ತಿರುವನಂತಪುರ-ಹಸ್ರತ್ ನಿಝಾಮುದ್ದೀನ್ ರಾಜಧಾನಿ ಎಕ್ಸ್‍ಪ್ರೆಸ್ಸ್ ಎಂಬೆರಡು ರೈಲು ಗಾಡಿಗಳಿಗೆ ಕಾಸರಗೋಡು ನಿಲ್ದಾಣದಲ್ಲಿ ನಿಲುಗಡೆ ನೀಡಿರುದಾಗಿ ತಿಳಿದುಬಂದಿದೆ.
ರಾಜ್ಯ ಬಿಜೆಪಿ ಮುಖಂಡರಾದ ಪಿ.ಕೆ.ಕೃಷ್ಣದಾಸ್ ಹಾಗೂ ಎಂ.ಗಣೇಶ್ ಅವರು ಜಿಲ್ಲಾ ಬಿಜೆಪಿ ಅಧಿಕೃತರಿಗೆ ಈ ಮಾಹಿತಿ ನೀಡಿರುವುದಾಗಿ ಶ್ರೀಕಾಂತ್ ತಿಳಿಸಿದ್ದಾರೆ.
ಜನರ ಸುಧೀರ್ಘ ಕಾಲದ ಬೇಡಿಕೆ ಪರಿಗಣಿಸಿ ಕಾಸರಗೋಡು ನಿಲ್ದಾಣದಲ್ಲಿ ನಿಲುಗಡೆ ನೀಡಿರುವ ರೈಲ್ವೇ ಇಲಾಖೆಯ ಅಧಿಕಾರಿಗಳಿಗೆ, ಕೇಂದ್ರ ರೈಲ್ವೇ ಸಚಿವ ಫೀಯೂಶ್ ಗೋಯೆಲ್ ಅವರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅಭಿನಂದನೆ ಸಲ್ಲಿಸಿದ್ದಾರೆ. ರೈಲು ಗಾಡಿಗೆ ನೀಡಿರುವ ನಿಲುಗಡೆ ಆದೇಶವು ಕೇಂದ್ರ ಸರಕಾರವು ಜಿಲ್ಲೆಗೆ ನೀಡಿರುವ ಕೊಡುಗೆಗಳಲ್ಲಿ ಮಹತ್ತರವಾದುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿರುವರು.
ಸಂಸದರಿಗೂ ಮಾಹಿತಿ ಲಭ್ಯ:
ರಾಜಧಾನಿ ರೈಲುಗಾಡಿಗೆ ಕಾಸರಗೋಡಿನಲ್ಲಿ ನೀಡಿರುವ ನಿಲುಗಡೆಯ ಬಗ್ಗೆ ಸಂಸದ ಪಿ.ಕರುಣಾಕರನ್ ಅವರಿಗೆ ಕೇಂದ್ರ ರೈಲ್ವೇ ಸಚಿವರ ಕಚೇರಿಯಿಂದ ಮಾಹಿತಿ ರವಾನೆಯಾಗಿದ್ದು, ಈ ಬಗ್ಗೆ ಶೀಘ್ರ ಕೇಂದ್ರ ಸಚಿವರನ್ನು, ಅಧಿಕಾರಿಗಳನ್ನು ಭೇಟಿಯಾಗಿ ಮುಂದಿನ ಕ್ರಮ ಕೈಗೊಳ್ಳಲು ತೊಡಗಿಸುವುದಾಗಿ ಸಂಸದರು ತಿಳಿಸಿದ್ದಾರೆ.
ಶಾಸಕರ ಪರಿಶ್ರಮ ಶ್ಲಾಘನೀಯ:
ರಾಜಧಾನಿ ರೈಲುಗಾಡಿಗೆ ಕಾಸರಗೋಡಿನಲ್ಲಿ ನಿಲುಗಡೆ ನೀಡುವ ಸಂಬಂಧ ಈ ಹಿಂದೆ ಕಾಸರಗೋಡು ಸಮಸದೆನ್.ಎ.ನೆಲ್ಲಿಕುನ್ನು ಅವರು ಶ್ರಮ ವಹಿಸಿದ್ದು, ರೈಲ್ವೇಅಧಿಕೃತರು ಹಾಗೂ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿ ಮನವಿ ನೀಡಿದ್ದರು ಎಂಬುದನ್ನೂ ಇಲ್ಲಿ ಸ್ಮರಿಸಬಹುದು.