ಮಂಜೇಶ್ವರ: ಸಿಪಿಐಎಂ ಪಕ್ಷದ ಹಿರಿಯ ನೇತಾರ ದಿ.ಬಿ.ಎಂ.ರಾಮಯ್ಯ ಶೆಟ್ಟಿ ಅವರ 16ನೇ ಸಂಸ್ಮರಣೆಯನ್ನು ಬುಧವಾರ ಹೊಸಂಗಡಿ ಸಮೀಪದ ಹೊಸಬೆಟ್ಟು ಸ್ಮøತಿ ಮಂಟಪದಲ್ಲಿ ನಡೆಯಿತು.
ಮಾಜಿ ಶಾಸಕ ನ್ಯಾಯವಾದಿ ಸಿ.ಎಚ್.ಕುಂಞÂಂಬು ಸ್ಮøತಿ ಮಂಟಪದಲ್ಲಿ ಪುಷ್ಪಾಚ್ಣೆಗೈದು ಗೌರವ ನಮನ ಸಲ್ಲಿಸಿ ಚಾಲನೆ ನೀಡಿದರು. ಹಿರಿಯ ನೇತಾರರಾದ ದಾಮೋದರ ಮಾರ್ಲ ಧ್ವಜಾರೋಹಣಗೈದರು. ಜಿಲ್ಲಾ ಮುಖಂಡರಾದ ಡಾ.ವಿ.ಪಿ.ಪಿ. ಮುಸ್ತಫ, ಪ್ರಶಾಂತ್ ಕನಿಲ, ಸಾದಿಕ್ ಚೆರುಗೋಳಿ, ಅರವಿಂದ ಸಿ., ಕೆ.ಕಮಲಾಕ್ಷ, ಕೆ.ಕೃಷ್ಣ ಶೆಟ್ಟಿಗಾರ್, ವಿಜಯ ಕನಿಲ, ಚಂದಪ್ಪ ಮಾಸ್ತರ್, ರಾಧಾ ಕನಿಲ, ದಿ.ರಾಮಯ್ಯ ಶೆಟ್ಟಿಯವರ ಪತ್ನಿ ವಾರಿಜಾ ಶೆಟ್ಟಿ ಮತ್ತು ಮಕ್ಕಳು ಉಪಸ್ಥಿತರಿದ್ದರು.
ಕೆ.ಕಮಲಾಕ್ಷ ಸ್ವಾಗತಿಸಿ, ಬಿ.ಎಂ. ಕರುಣಾಕರ ಶೆಟ್ಟಿ ವಂದಿಸಿದರು.