ಕಾಸರಗೋಡು: 65 ವರ್ಷ ಪ್ರಾಯ ಪೂರ್ಣಗೊಂಡಿದ್ದು, ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿರುವ, ಪಿಂಚಣಿ ದೊರೆಯದೇ ಇರುವ ಸೈನಿಕರಿಗೆ ಯಾ ಅವರ ವಿಧವೆಯರಿಗೆ ಕೇಂದ್ರ ಸೈನಿಕ ಮಂಡಳಿಯಿಂದ ನೀಡಲಾಗುತ್ತಿರುವ ಪೆನ್ಯೂರಿ ಗ್ರಾಂಟ್ ಮುಂದೆಯೂ ಲಭಿಸುವ ನಿಟ್ಟಿನಲ್ಲಿ ಜಿಲ್ಲಾ ಸೈನಿಕ ಕಲ್ಯಾಣ ಕಚೇರಿ ಅಕಾರಿ ಲೈಫ್ ಸರ್ಟಿಫಿಕೆಟ್ ದೃಢೀಕರಿಸಿ ನೀಡಲಿದ್ದಾರೆ.
ಅರ್ಹರು ನೇರವಾಗಿ ಯಾ ಸಂಬಂಧಪಟ್ಟವರ (ಆಶ್ರಿತರ) ಮೂಲಕ ದಾಖಲೆಗಳ ಸಹಿತ ಸಂಪರ್ಕಿಸಬಹುದು. ಆನ್ ಲೈನ್ ಮೂಲಕ ನವೀಕರಣ ನಡೆಸುವ ವೇಳೆ ಲೈಫ್ ಸರ್ಟಿಫಿಕೆಟ್‍ನೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಸಹಿತ ಅಪ್ ಲೋಡ್ ನಡೆಸಬೇಕು. ಪ್ರತಿತಿಂಗಳು ಆರ್ಥಿಕ ಸಹಾಯ ಪಡೆದುಕೊಳ್ಳುತ್ತಿರುವ ದ್ವಿತೀಯ ಲೋಕ ಮಹಾಯುದ್ಧ ಸೈನಿಕರ ಯಾ ಅವರ ವಿ`Àವೆಯರು ಇದಕ್ಕೆ ಅರ್ಜಿ ಸಲ್ಲಿಸಬೇಕಿಲ್ಲ. ಮಾಹಿತಿಗೆ ದೂರವಾಣಿ ಸಂಖ್ಯೆ : 04994-256860 ಸಂಪರ್ಕಿಸಬಹುದಾಗಿದೆ.