ಕುಂಬಳೆ: ಕಲಾವಿದರು, ಕಲಾ ಕ್ಷೇತ್ರದ ವಿವಿಧ ರಂಗಗಳಲ್ಲಿ ಕಾರ್ಯನಿರ್ವಹಿಸುವವರ ಹಕ್ಕು ಸಂರಕ್ಷಣೆಯನ್ನು ಕಾಪಿಡುವಲ್ಲಿ ಸವಾಕ್ ಸಂಘಟನೆಗೆ ಬಹುದೊಡ್ಡ ಸಾಧನೆಗಳನ್ನು ಈವರೆಗೆ ದಾಖಲಿಸಲು ಸಾಧ್ಯವಾಗಿದೆ. ಸಾಮಾಜಿಕ ಸ್ಥಿತ್ಯಂತರಗಳೊಂದಿಗೆ ಹೊಂದಾಣಿಕೆಯಲ್ಲಿ ಮುನ್ನಡೆಯುವ ಸಾಮಥ್ರ್ಯ ಪ್ರತಿಯೊಬ್ಬನಲ್ಲೂ ಜಾಗೃತಗೊಂಡಾಗ ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯವಾಗುವುದು ಎಂದು ಸವಾಕ್ ರಾಜ್ಯ ಘಟಕದ ಕೋಶಾಧಿಕಾರಿ ಜಿ.ಕೆ.ಪಿಳ್ಳೆ ತಿಳಿಸಿದರು.
ಕಾಸರಗೋಡು ಸೇವಾಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಕಾಸರಗೋಡು ವಲಯ ಸವಾಕ್(ಸ್ಟೇಜ್ ಆಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಕೇರಳ)ಕಲಾ ಸಾಂಸ್ಕøತಿಕ ಸಂಗಮ ಕಾರ್ಯಕ್ರಮ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸವಾಕ್ ಕಾಸರಗೋಡು ವಲಯಾಧ್ಯಕ್ಷದಯಾ ಪಿಲಿಕುಂಜೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಸಹಾಯಕ ರಿಜಿಸ್ಟಾರ್ ಜಯಚಂದ್ರನ್, ಟಿ.ವಿ.ಗಂಗಾಧರನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಸವಾಕ್ ಜಿಲ್ಲಾ ಕಾರ್ಯದರ್ಶಿ ಸನ್ನಿ ಅಗಸ್ಟಿನ್, ಕಾರಡ್ಕ ಬ್ಲಾಕ್ ಅಧ್ಯಕ್ಷ ಮಧುಸೂದನ ಬಲ್ಲಾಳ್ ನಾಟೆಕಲ್ಲು, ಕಾಂಞÂಂಗಾಡ್ ಬ್ಲಾಕ್ ಅಧ್ಯಕ್ಷ ಸುರೇಶ್ ಬೇಕಲ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಕಾರಡ್ಕ, ದೇವರಾಜ್ ಉಪಸ್ಥಿತರಿದ್ದು ಶುಭಹಾರೈಸಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸವಾಕ್ ಜಿಲ್ಲಾ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಹಾಗೂ ಕಣ್ಣೂರು ವಿವಿಯ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾದ ಕಾಸರಗೋಡು ವಲಯ ಸವಾಕ್ ಕಾರ್ಯದರ್ಶಿ ಸುಶ್ಮಿತಾ ಆರ್.ಕುಂಬಳೆ ಅವರಿಗೆ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು. ದಿವಾಕರ ಅಶೋಕನಗರ ಸ್ವಾಗತಿಸಿ, ಸವಾಕ್ ವಲಯ ಕೋಶಾಧಿಕಾರಿ ಶೇಖರ ಬೇಕಲ್ ವಂದಿಸಿದರು. ಜ್ಯೋತಿ ಪ್ರಾರ್ಥಿಸಿದರು. ಬಳಿಕ ಸವಾಕ್ ವಲಯ ಸದಸ್ಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳ ವೈವಿಧ್ಯತೆ ಪ್ರದರ್ಶನಗೊಂಡಿತು.