ಪೆರ್ಲ:ಕೇರಳ ಸರಕಾರದ ಕಾರ್ಮಿಕ ವಿರುದ್ಧ ಜನದ್ರೋಹ ನೀತಿಗೆದುರಾಗಿ ಫೆಬ್ರವರಿ 1ರಂದು ನಡೆಯಲಿರುವ ಸೆಕ್ರಟರಿಯೇಟ್ ಮಾರ್ಚ್ ಪ್ರಚಾರಾರ್ಥ ಶನಿವಾರ ಪೆರ್ಲ ಮಣಿಯಂಪಾರೆಯಲ್ಲಿ ಕಾಲ್ನಡೆ ಪ್ರಚಾರ ಜಾಥ ನಡೆಯಿತು.
ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ಎ. ಶ್ರೀನಿವಾಸನ್ ಜಾಥಾ ಕ್ಯಾಪ್ಟನ್, ಬಿಎಂಎಸ್ ಎಣ್ಮಕಜೆ ಪಂಚಾಯಿತಿ ಸಮಿತಿ ಕಾರ್ಯದರ್ಶಿ ಮಂಜುನಾಥ ಇಕ್ಕೇರಿ ಅವರಿಗೆ ಧ್ವಜ ಹಸ್ತಾಂತರಿಸಿ ಮಾತನಾಡಿದರು.ಜಾಥಾ ಮೆನೇಜರ್, ಬಿಎಂಎಸ್ ಎಣ್ಮಕಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ಉದಯ ಶುಭಂ ಪೆರ್ಲ, ಬದಿಯಡ್ಕ ವಲಯಾಧ್ಯಕ್ಷ ಶಿವರಾಮ್ ಪೆಲ್ತಾಜೆ, ಜೊತೆ ಕಾರ್ಯದರ್ಶಿ ಗೋಪಾಲ ಗೋಳಿಕಟ್ಟೆ ಮತ್ತಿತರರಿದ್ದರು.