ಬದಿಯಡ್ಕ: ಇಂದು ಹಾಗೂ ನಾಳೆ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಆವರಣದಲ್ಲಿ ನಡೆಯಲಿರುವ ಗಡಿನಾಡಜಿಲ್ಲಾ12ನೇಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದತೆಗಳು ಪೂರ್ಣಗೊಂಡಿದ್ದು, ಬೆಳಿಗ್ಗೆ ಸಮ್ಮೇಳನದಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆತರುವುದರೊಂದಿಗೆ ಚಾಲನೆ ದೊರಕಲಿದೆ.
ಶುಕ್ರವಾರ ಶಾಲಾ ಆವರಣದಲ್ಲಿ ಸಿದ್ದತೆಗಳು ವಿಸ್ಕøತವಾಗಿ ಮುನ್ನಡೆದಿದ್ದು, ರಾತ್ರಿ ಶಾಲಾಶಿಕ್ಷಕರು, ಸ್ಥಳೀಯ ಯುವ ಕಾರ್ಯಕರ್ತರ ತಂಡ ಊಟೋಪಚಾರ ವ್ಯವಸ್ಥೆ ನಿರ್ವಹಣೆಗೆ ಸನ್ನಾಹ ನಡೆಸಿದ್ದು ಕಂಡುಬಂತು. ಜೊತೆಗೆ ಸಮ್ಮೇಳನದಲ್ಲಿ ಗಮನ ಸೆಳೆಯಲಿರುವ ವೇದಿಕೆ ಸಿದ್ದತೆ ಪೂರ್ಣಗೊಂಡಿದೆ. ಉಳಿದಂತೆ ಪುಸ್ತಕ ಪ್ರದರ್ಶನದ ವ್ಯವಸ್ಥೆಗಳೂ ಪೂರ್ಣವಾಗಿದ್ದು, ಅಕ್ಷರ ಪ್ರೇಮಿಗಳಿಗೆ ಖುಷಿ ನೀಡಲು ವ್ಯವಸ್ಥೆಗೊಳಿಸಲಾಗಿದೆ.
ಕಸಾಪ ಅಧ್ಯಕ್ಷ ಎಸ್ ವಿ ಭಟ್, ಪ್ರಮುಖರಾದ ನವೀನಚಂದ್ರ ಮಾಸ್ತರ್ ಮಾನ್ಯ, ರಾಮಚಂದ್ರ ಭಟ್ ಧರ್ಮತ್ತಡ್ಕ, ಜಯದೇವ ಖಂಡಿಗೆ, ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಉದನೇಶವೀರ ನೀರ್ಚಾಲು, ಎಸ್.ಎನ್.ಭಟ್ ಅರ್ಜುನಗುಳಿ,ಜಯಪ್ರಕಾಶ ಶೆಟ್ಟಿ ಬೇಳ,ಬಾಲ ಮಧುರಕಾನನ ಮೊದಲಾದವರ ತಂಡ ನಿರಂತರ ಚಟುವಟಿಕೆಗಳಿಂದ ವ್ಯವಸ್ಥೆಯ ನಿರ್ವಹಣೆ ಕೈಗೊಂಡಿದ್ದಾರೆ.