ಕಾಸರಗೋಡು: ಮಲಬಾರ್ ದೇವಸ್ವಂ ಬೋರ್ಡ್ ವ್ಯಾಪ್ತಿಯ ಕಾಸರಗೋಡು ತಾಲೂಕಿನ ಮೊಗ್ರಾಲ್ ಪುತ್ತೂರು ಗ್ರಾಮದ ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ಕ್ಷೇತ್ರದ ಪರಂಪರೆಯೇತರ ಟ್ರಸ್ಟಿಗಳ ನೇಮಕ ಸಂಬಂಧ ಅರ್ಜಿ ಕೋರಲಾಗಿದೆ.
ಅರ್ಜಿದಾರರು ದೇವಾಲಯದ ಸಮೀಪ ನಿವಾಸಿಗಳೂ, ಹಿಂದೂ ಧರ್ಮೀಯರೂ ಆಗಿರಬೇಕು. ಅರ್ಜಿಗಳನ್ನು ಫೆ.11ರ ಸಂಜೆ 5 ಗಂಟೆಗೆ ಮುಂಚಿತವಾಗಿ ಮಲಬಾರ್ ದೇವಸ್ವಂ ಬೋರ್ಡ್ ನ ಕಾಸರಗೋಡು ವಿಭಾಗದ ನೀಲೇಶ್ವರದಲ್ಲಿರುವ ಸಹಾಯಕ ಕಮೀಷನರ್ ಅವರ ಕಚೇರಿಗೆ ಸಲ್ಲಿಸಬೇಕು. ಅರ್ಜಿಫಾರಂ ಮಲಬಾರ್ ದೇವಸ್ವಂ ಬೋರ್ಡ್ ವೆಬ್ ಸೈಟ್ ಮತ್ತು ನೀಲೇಶ್ವರದ ಸಹಾಯಕ ಕಮೀಷನರ್ ಅವರ ಕಚೇರಿಯಲ್ಲಿ ಲಭ್ಯವಿದೆ.
ಹೆಸರು,ಮಾಹಿತಿ ಸಲ್ಲಿಸಬೇಕು:
ಮಲಬಾರ್ ದೇವಸ್ವಂ ಬೋರಡ್ ಜಾರಿಗೊಳಿಸಲು ಉದ್ದೇಶಿಸಿರುವ ದೇವಾಲಯ ನೌಕರರ ಆರೋಗ್ಯ-ಅಪಘಾತ ವಿಮಾ ಯೋಜನೆಯ ಫಲಾನುಭವಿಗಳ ಆಯ್ಕೆಗಾಗಿ ಮಲಬಾರ್ ದೇವಸ್ವಂ ಬೋರ್ಡ್ ಕಾಸರಗೋಡು ವಿಭಾಗ ವ್ಯಾಪ್ತಿಯ ದೇವಾಲಯ ನೌಕರರ ಹೆಸರು, ಇತರ ಮಾಹಿತಿಗಳನ್ನು ಸಲ್ಲಿಸಲು ಬಾಕಿಯಿರುವವರು, ನಿಗದಿತ ಮಾದರಿಯಲ್ಲಿ ಅವನ್ನು ಜ.31ರ ಮುಂಚಿತವಾಗಿ ಮಲಬಾರ್ ದೇವಸ್ವಂ ಬೋರ್ಡ್ ಕಾಸರಗೋಡು ಸಹಾಯಕ ಕಮೀಷನರ್ ಕಚೇರಿಗೆ ಸಲ್ಲಿಸಬೇಕು.