ಕಾಸರಗೋಡು: ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‍ಗಳ ಮತ್ತು ನಗರಸಭೆಗಳ ಫೆಬ್ರವರಿ ತಿಂಗಳಲ್ಲಿ ಬರಿದಾಗುವ ಪರಿಶಿಷ್ಟ ಜಾತಿ ಪ್ರಮೋಟರ್ ಹುದ್ದೆಗಳಿಗೆ ನಿಗದಿತ ಅರ್ಹತೆಯಿರುವ ಪರಿಶಿಷ್ಟ ಜಾತಿಯವರಾದ ಯುವತಿ-ಯುವಕರಿಂದ ಅರ್ಜಿ ಕೋರಲಾಗಿದೆ.
ಕಾಸರಗೋಡು ನಗರಸಭೆಯಲ್ಲಿ ಎರಡು, ಕಾಂಞಂಗಾಡ್, ನೀಲೇಶ್ವರ ನಗರಸಭೆಗಳಲ್ಲಿ, ಗ್ರಾಮ ಪಂಚಾಯತ್‍ಗಳಾದ ಎಣ್ಮಕಜೆ, ಮಂಗಲ್ಪಾಡಿ, ಮಂಜೇಶ್ವರ, ಮೀಂಜ, ಪೈವಳಿಕೆ, ಪುತ್ತಿಗೆ, ವರ್ಕಾಡಿ, ಬೇಡಡ್ಕ, ದೇಲಂಪಾಡಿ, ಕುತ್ತಿಕೋಲ್, ಮುಳಿಯಾರು, ಬದಿಯಡ್ಕ, ಚೆಮ್ನಾಡ್, ಚೆಂಗಳ, ಮೊಗ್ರಾಲ್ ಪುತ್ತೂರು, ಕುಂಬಳೆ, ಮಡಿಕೈ, ಪಳ್ಳಿಕ್ಕರೆ, ಪುಲ್ಲೂರು-ಪೆರಿಯ, ಉದುಮಾ, ಕಯ್ಯೂರ್-ಚೀಮೇನಿ, ಪಿಲಿಕೋಡ್, ವಲಿಯಪರಂಬ, ಬಳಾಲ್, ಕಿನಾನೂರು-ಕರಿಂದಳಂ, ಪನತ್ತಡಿ, ವೆಸ್ಟ್ ಏಳೇರಿಗಳಲ್ಲಿ ತಲಾ ಒಂದು ಹುದ್ದೆಗಳು ತೆರವಾಗಲಿವೆ.
ಆಸಕ್ತ ಅರ್ಜಿದಾರರು 18ರಿಂದ 40 ವರ್ಷ ಪ್ರಾಯದವರಾಗಿರಬೇಕು. ಪದವಿ/ಪ್ಲಸ್ ಟು ತೇರ್ಗಡೆ ಹೊಂದಿದವರಾಗಿರಬೇಕು. ಹೆಚ್ಚುವರಿ ಶಿಕ್ಷಣಾರ್ಹತೆ ಇದ್ದವರಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ಅರ್ಹತಾಪತ್ರಗಳ ಸಹಿತ ಜ.17ರ ಮುಂಚಿತವಾಗಿ ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಫಾರಂ ಮಾದರಿ ಮತ್ತು ಇತರ ಮಾಹಿತಿಗೆ ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿ, ಬ್ಲಾಕ್/ನಗರಸಭೆ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಗಳಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 04994-256162. ಸಂಪರ್ಕಿಸಬಹುದು.