ಕುಂಬಳೆ: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಕಾಸರಗೋಡು ಜಿಲ್ಲೆಯ ಉಪಸಂಘವಾದ ಕುಂಬಳೆ ಘಟಕದ ಮಹಾಸಭೆ ಆರಿಕ್ಕಾಡಿ ಶ್ರೀ ಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನದ ಪರಿಸರದಲ್ಲಿ ಭಾನುವಾರ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಮೇಶ್ ಕುದ್ರೆಕೋಡ್ ಅವರು ವಹಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಜೆ.ಕೆ.ರಾವ್, ಅತಿಥಿಗಳಾಗಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ಬಿ.ಪಿ.ವೆಂಕಟ್ರಮಣ, ಕೀಕಾನ ನಲಂದ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ನಿರಂಜನ ಕೊರಕೋಡು ಉಪಸ್ಥಿತರಿದ್ದರು.
ಸಭೆಯಲ್ಲಿ ಮುಖ್ಯ ಅತಿಥಿಗಳು ಮುಂದಿನ ಕ್ಷಾತ್ರ ಸಂಗಮವನ್ನು ಮಂಗಳೂರು ಮತ್ತು ಕಾಸರಗೋಡು ಸಂಘಗಳ ಸಹಯೋಗದೊಂದಿಗೆ ಮಾಡುವ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಘದ ಜಿಲ್ಲಾಧ್ಯಕ್ಷ ಸಂಘಟನೆಯ ಪ್ರಾರಂಭ ಮತ್ತು ಬೆಳವಣಿಗೆಯನ್ನು ವಿವರಿಸಿದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ರಮೇಶ್ ಕುದ್ರೆಕೋಡ್, ಕಾರ್ಯದರ್ಶಿಯಾಗಿ ಗುರುರಾಜ್ ರಾಮನಗರ, ಉಪಾಧ್ಯಕ್ಷರಾಗಿ ಜಯಪ್ರಕಾಶ್ ಕೆ.ವಿ, ದಾಮೋದರ ಪುಜೂರು, ಸುಜಾತ ಕುಂಬಳೆ, ಜೊತೆಕಾರ್ಯದರ್ಶಿಯಾಗಿ ತಾರಾನಾಥ ಪುಜೂರು, ಸಂದೀಪ್ ಕಾರ್ಲೆ, ಧನು ಮನಮೋಹನ, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಪುಜೂರು, ಜಿಲ್ಲಾ ಪ್ರತಿನಿಧಿಗಳಾಗಿ ಕೆ.ಬಾಲಚಂದ್ರ ರಾವ್, ಪ್ರೇಂ ಕಿಶೋರ್ ಕೆ. ಆಯ್ಕೆಯಾದರು. ನಂದನ ಗುರರಾಜ್ ಪ್ರಾರ್ಥನೆ ಹಾಡಿದರು. ಮೌನೇಶ್ ಪುಜೂರು ಸ್ವಾಗತಿಸಿ, ವಂದಿಸಿದರು.