HEALTH TIPS

ಜಿಲ್ಲೆಯ ವಿವಿಧ ಠಾಣಾ ಪರಿಸರದಲ್ಲಿ ತುಕ್ಕು ಹಿಡಿಯುತ್ತಿರುವ ವಾಹನಗಳ ವಿಲೇವಾರಿಗೆ ಜಿಲ್ಲಾಡಳಿತದಿಂದ ಕ್ರಮ


          ಕಾಸರಗೋಡು: ಜಿಲ್ಲೆಯ ವಿವಿಧ ಠಾಣಾ ಪರಿಸರಗಳಲ್ಲಿ ನಾನಾ ಕೇಸುಗಳಲ್ಲಿ ವಶಪಡಿಸಿಕೊಳ್ಳಲಾದ ವಾಹನಗಳ ಮೋಕ್ಷಕ್ಕಾಗಿ ಜಿಲ್ಲಾಡಳಿತ ಕ್ರಮ ವಹಿಸಿದೆ. ಜಿಲ್ಲೆಯ ವಿವಿಧ ಸರಕಾರಿ ಕಚೇರಿ ಪರಿಸರಗಳಲ್ಲಿ ನಿಲ್ಲಿಸಲಾಗಿರುವ ಹಲವು ವಾಹನಗಳು ಮಳೆ, ಗಾಳಿಗೆ ಮೈಯೊಡ್ಡಿ ತುಕ್ಕು ಹಿಡಿದು ನಾಶವಾಗುತ್ತಿದ್ದು, ಪರಿಸರದಲ್ಲಿ ಓಡಾಟ ನಡೆಸುವ ಜನಸಾಮಾನ್ಯರು ಸಹಿತ ಅಧಿಕಾರಿಗಳಿಗೆ ತೊಂದರೆಯಾಗುತ್ತಿರುವ ಕಾರಣದಿಂದ ಇಂತಹ ವಾಹನಗಳ ವಿಲೇವಾರಿಗೆ ಜಿಲ್ಲಾಡಳಿತ ಮುಂದಾಗಿದೆ. ಹಾಳಾಗುತ್ತಿರುವ ಇಂತಹ ವಾಹನಗಳನ್ನು ಕಾನೂನಾತ್ಮಕವಾಗಿ ಪರಿಹಾರ ಕಾಣುವ ಮೂಲಕ ಏಲಂ ನಡೆಸಿ, ವಾಹನಗಳ ಮಾರಾಟವನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹೇಳಿದ್ದಾರೆ. ಇದಕ್ಕಾಗಿ ಪೋಲಿಸ್, ಕಂದಾಯ, ಅಬಕಾರಿ ಸಹಿತ ಅರಣ್ಯ ಅಧಿಕಾರಿಗಳ ಸಭೆಯು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈಗಾಗಲೇ ನಡೆದಿದೆ. ಆರಂಭದ ಹಂತದಲ್ಲಿ ಒಟ್ಟು 257 ವಾಹನಗಳ ಏಲಂ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಅನಧಿಕೃತ ಮರಳು ಸಾಗಾಟ, ತಾಂಬಾಕು ಸಹಿತ ಮಾದಕ ವಸ್ತುಗಳನ್ನು ಅಕ್ರಮ ಸಾಗಾಟಕ್ಕೆ ಬಳಸಿದ್ದ ಹಲವು ವಾಹನಗಳು ಠಾಣಾ ಪರಿಸರ, ತಾಲೂಕು ಕಚೇರಿ ಪರಿಸರದಲ್ಲಿವೆ. ಅಕ್ರಮವೆಸಗಲ್ಪಟ್ಟ ವಾಹನ ಮಾಲಕರು ನಿರ್ದಿಷ್ಟ ದಂಡ ತೆತ್ತು ವಾಹನಗಳ ಮಾಲಕತ್ವದ ದಾಖಲೆಗಳನ್ನು ಹಾಜರುಪಡಿಸಿ ಇವುಗಳನ್ನು ಕೊಂಡೊಯ್ಯಬಹುದಾಗಿದೆ. ಆದರೆ ಹೆಚ್ಚಿನ ಮಾಲಕರು ದುಪ್ಪಟ್ಟು ದಂಡ ಪಾವತಿಸಬೇಕಿರುವುದರಿಂದ ವಾಹನಗಳನ್ನು ಕೊಂಡೊಯ್ಯುದಿಲ್ಲ. ವಶಪಡಿಸಿಕೊಂಡ ಹಲವು ವಾಹನಗಳ ವಿವರಗಳನ್ನು ಮತ್ತು ದಾಖಲೆ ಪತ್ರವನ್ನು ಕ್ರೋಢಿಕರಿಸಿ ನ್ಯಾಯಾಲಯದ ಒಪ್ಪಿಗೆ ಮೇರೆಗೆ ತಿಂಗಳ ನಂತರ ಹರಾಜು ಪ್ರಕ್ರಿಯೆಯನ್ನು ಏರ್ಪಡಿಸಲಾಗುತ್ತದೆ. ಜಿಲ್ಲೆಯ ಹಲವು ಭಾಗಗಳಲ್ಲಿ ವಶಪಡಿಸಿಕೊಳ್ಳಲಾದ ನಾನಾ ವಾಹನಗಳನ್ನು ಪ್ರಥಮ ಬಾರಿಗೆ ಜಾಹಿರಾತು ನೀಡುವ ಮೂಲಕ ಏಲಂ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದೆ. ಹರಾಜು ಪ್ರಕ್ರಿಯೆಯ ಮೂಲಕ ವಾಹನಗಳನ್ನು ಏಲಂ ಕರೆದು ಹೊಸ ಮಾಲಕನಿಗೆ ದಾಖಲೆ ಸಹಿತ ಹಸ್ತಾಂತರಿಸಲಾಗುತ್ತದೆ.
         ಮಾಲಕರಿಗೆ ಮೂವತ್ತು ದಿನಗಳ ಕಾಲಾವಕಾಶ:
    ಅಕ್ರಮ ಸಾಗಾಟದ ಕಾರಣ ಮತ್ತು ಸೂಕ್ತ ದಾಖಲೆ ಪತ್ರಗಳು ಇಲ್ಲದ ಕಾರಣ ಪೋಲಿಸರು, ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡ ವಾಹನಗಳನ್ನು ಸೂಕ್ತ ದಂಡ ಪಾವತಿಸಿ ಕೊಂಡೊಯ್ಯಲು ಮಾಲಕರಲ್ಲಿ ಈಗಾಗಲೇ ವಿನಂತಿಸಲಾಗಿದೆ.  30 ದಿನಗಳ ಒಳಗಾಗಿ ಮಾಲಕರು ಸೂಕ್ತ ದಾಖಲೆ ಸಹಿತ ದಂಡವನ್ನು ಪಾವತಿಸಿದಲ್ಲಿ ವಾಹನಗಳನ್ನು ಅವರಿಗೆ ಒಪ್ಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ಮೂಲ ಮಾಲಕರು ಸಂಬಂಧಪಟ್ಟ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿ ವಾಹನಗಳನ್ನು ನಿರ್ದಿಷ್ಟ ದಂಡ ಪಾವತಿಸಿ ಸ್ವೀಕರಿಸಬೇಕಿದೆ. 30 ದಿನಗಳ ಒಳಗಾಗಿ ಮಾಲಕರ ಪ್ರತಿಕ್ರಿಯೆ ಬಾರದಿದ್ದಲ್ಲಿ ವಾಹನಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹೇಳಿದ್ದಾರೆ. ಹರಾಜು ಪ್ರಕ್ರಿಯೆಯ ಜವಾಬ್ದಾರಿಯನ್ನು ಕಾಞಂಗಾಡು ಉಪ ಜಿಲ್ಲಾಧಿಕಾರಿ ಅರುಣ್.ಕೆ.ವಿಜಯನ್, ನಾರ್ಕೋಟಿಕ್ಸ್ ವಿಭಾಗದ ಡಿವೈಎಸ್‍ಪಿ ನಂದನ್ ಪಿಳ್ಳೆ, ಹಾಗೂ ಪಿ.ಅರ್ಜುನನ್ ಅವರು ವಹಿಸಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries