ಬದಿಯಡ್ಕ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಎನ್‍ಎಸ್‍ಎಸ್ ನೇತೃತ್ವದಲ್ಲಿ ಮಾನ್ಯದಲ್ಲಿ ನಡೆದ ಸಪ್ತದಿನ ಶಿಬಿರದಲ್ಲಿ ಮಾನ್ಯ ಪರಿಸರದಲ್ಲಿ ಉಚಿತವಾಗಿ ಬಟ್ಟೆ ಚೀಲ ವಿತರಿಸಲಾಯಿತು. ವಿದ್ಯಾರ್ಥಿಗಳು ಮನೆ ಮನೆಗೆ ತೆರಳಿ ಪ್ಲಾಸ್ಟಿಕ್ ಉಪಯೋಗದ ದುಷ್ಪರಿಣಾಮದ ಬಗ್ಗೆ ವಿವರಿಸಿದರು.
ವಿದ್ಯಾರ್ಥಿಗಳು ಪರಿಸರದ ಬಗೆಗಿನ ಕಾಳಜಿ ಮೆಚ್ಚುಗೆಗೆ ಪಾತ್ರವಾಯಿತು. ಮಾನ್ಯ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಗೋವಿಂದನ್ ನಂಬೂದಿರಿ, ಯೋಜನಾಧಿಕಾರಿ ಮಹೇಶ್ ಏತಡ್ಕ, ಸಂಸ್ಕøತ ಅಧ್ಯಾಪಕ ಕೃಷ್ಣನ್ ನಂಬೂದಿರಿ, ಮಾನ್ಯ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ ನೇತೃತ್ವ ವಹಿಸಿದರು.