ಬದಿಯಡ್ಕ: ಮಾರ್ಪನಡ್ಕ ಶ್ರೀ ಚೌಕಾರು ಗುಳಿಗಬನದ ತೃತೀಯ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಹಾಗೂ ಶ್ರೀ ಗುಳಿಗ ದೈವದ ಕೋಲವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜ.21ರಂದು ಸೋಮವಾರ ಬಳ್ಳಪದವು ಬ್ರಹ್ಮಶ್ರೀ ಮಾಧವ ಉಪಾಧ್ಯಾಯರ ನೇತೃತ್ವದಲ್ಲಿ ಜರಗಲಿರುವುದು.
ಬೆಳಗ್ಗೆ 7.30ಕ್ಕೆ ಗಣಪತಿ ಹವನ, ಶುದ್ಧಿಕಲಶ, ತಂಬಿಲ, 9.30ರಿಂದ ಶ್ರೀ ಗೋಪಾಲಕೃಷ್ಣ ಭಜನ ಸಂಘ ಅಗಲ್ಪಾಡಿ-ಜಯನಗರ ಇವರಿಂದ ಭಜನೆ, 11 ಗಂಟೆಗೆ ಧಾರ್ಮಿಕ ಸಭೆಯಲ್ಲಿ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ನಾಟಿವೈದ್ಯ ಐತ್ತಪ್ಪ ಎ.ಪಿ.ಸರ್ಕಲ್ ಅವರನ್ನು ಸನ್ಮಾನಿಸಲಾಗುವುದು. ಸುಬ್ರಹ್ಮಣ್ಯ ಭಟ್ ತಲೇಕ ಅಧ್ಯಕ್ಷತೆ ವಹಿಸಲಿರುವರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಧಾರ್ಮಿಕ ಉಪನ್ಯಾಸವನ್ನು ನೀಡುವರು. ಬಾಬು ಮಾಸ್ತರ್ ಅಗಲ್ಪಾಡಿ, ರಾಮಚಂದ್ರ ಭಟ್ ಉಪ್ಪಂಗಳ, ಗುಳಿಗಬನ ಸೇವಾಸಮಿತಿ ಅಧ್ಯಕ್ಷ ಸುರೇಶ್ ಮುಖಾರಿ ಮಾರ್ಪನಡ್ಕ, ಶ್ರೀಧರ ಪದ್ಮಾರ್, ರಾಜೇಶ್ ಮಾಸ್ತರ್ ಅಗಲ್ಪಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ ಪ್ರಸಾದ ಭೋಜನ, ಅಪರಾಹ್ನ 2.30ಕ್ಕೆ ಗುಳಿಗ ದೈವದ ಕೋಲ, ಪ್ರಸಾದ ವಿತರಣೆ ನಡೆಯಲಿದೆ.