ಕಾಸರಗೋಡು: ಕಾಸರಗೋಡು ಹೊಸಬಸ್ ನಿಲ್ದಾಣ ಸಂಕೀರ್ಣದಲ್ಲಿ ಚಟುವಟಿಕೆ ನಡೆಸುತ್ತಿರುವ ಜಿಲ್ಲಾ ಕುಟುಂಬ ನ್ಯಾಯಾಲಯ ಇಂದು (ಜ.5) ವಿದ್ಯಾನಗರದ ಸರಕಾರಿ ಅಂಧರ ವಿದ್ಯಾಲಯ ಬಳಿಯ ಹರಿಪ್ರೇಮ ಕಟ್ಟಡ ಸಮುಚ್ಚಯಕ್ಕೆ ಸ್ಥಳಾಂತರಗೊಳ್ಳಲಿದೆ.
ನ್ಯಾಯಾಲಯದ ಚಟುವಟಿಕೆಗಳ ಔಪಚಾರಿಕ ಉದ್ಘಾಟನೆ ಅಂದು ಮಧ್ಯಾಹ್ನ 3.30ಕ್ಕೆ ನಡೆಯಲಿದ್ದು,ಹೈಕೋರ್ಟ್ ನ್ಯಾಯಮೂರ್ತಿ ಅಲೆಕ್ಸಾಂಡರ್ ಥಾಮಸ್ ಉದ್ಘಾಟಿಸುವರು. ಕಾಸರಗೋಡು ಜಿಲ್ಲಾ ನ್ಯಾಯಮೂರ್ತಿ ಮನೋಹರ ಕಿಣಿ ಅಧ್ಯಕ್ಷತೆವಹಿಸುವರು. ಸಂಸದ ಪಿ.ಕರುಣಾಕರನ್ ಮುಖ್ಯ ಅತಿಥಿಯಾಗಿರುವರು. ಶಾಸಕ ಎನ್.ಎ.ನೆಲ್ಲಿಕುನ್ನು, ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ಮಧೂರು ಗ್ರಾಮಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್, ಜಿಲ್ಲಾ ಸರಕಾರಿ ಪ್ಲೀಡರ್ ಪಿ.ವಿ.ಜಯರಾಜನ್ ಮೊದಲಾದವರು ಉಪಸ್ಥಿತರಿರುವರು.