ಬದಿಯಡ್ಕ: ಬದಿಯಡ್ಕದ ಸಂಸ್ಕøತಿ ಭವನದಲ್ಲಿ ಹರಿದಾಸ ಜಯಾನಂದ ಕುಮಾರ್ ಅವರ ಷಷ್ಟ್ಯಬ್ದ ಅಂಗವಗಿ 37 ನೇ ಹರಿಕಥಾ ಸತ್ಸಂಗದ ಉದ್ಘಾಟನೆಯನ್ನು ಶಾಂತರಾಮ ಶೆಣೈ ಅವರು ನೆರವೇರಿಸಿದರು.
ಗಣೇಶ್ ಶೆಣೈ ಸ್ವಾಗತಿಸಿ, ಜಯದೇವ ಶೆಣೈ ವಂದಿಸಿದರು. ಬಳಿಕ ಜಯಾನಂದ ಕುಮಾರ್ ಹೊಸದುರ್ಗ ಅವರಿಂದ ನಡೆದ ಹರಿಕಥಾ ಸತ್ಸಂಗದಲ್ಲಿ ಹಿಮ್ಮೇಳದಲ್ಲಿ ಪ್ರಕಾಶ್ ಕುಂಟಾರು (ಹಾರ್ಮೋನಿಯಂ) ಮತ್ತು ಅಚ್ಯುತಾನಂದ ಕೂಡ್ಲು (ತಬ್ಲಾ) ಸಹಕರಿಸಿದರು.