ಕಾಸರಗೋಡು: ಮತದಾತರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಬೇಕಿದ್ದರೆ ಇನ್ನು ಅತ್ತಿಂದಿತ್ತ ಇತ್ತಿಂದತ್ತ ಅಲೆದಾಡಬೇಕಿಲ್ಲ. ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ಮತದಾತರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ನೂತನ ತಂತ್ರಜ್ಞಾನದೊಂದಿಗೆ ಚುನಾವಣೆ ಆಯೋಗ ರಂಗಕ್ಕಿಳಿದಿದೆ. ಇದರ ಫಲವಾಗಿ ರಚನೆಗೊಂಡಿರುವುದು ಮೊಬೈಲ್ ಅಪ್ಲಿಕೇಶನ್ ಆ್ಯಪ್.
ಈ ಮೂಲಕ ಇಡೀ ದೇಶದ ಮತದಾರರಿಗೆ ಸಂಬಂ„ಸಿದ ಎಲ್ಲ ಸೇವೆಗಳೂ, ಮಾಹಿತಿಗಳೂ ಲಭಿಸಲಿವೆ. ವೋಟರ್ ಹೆಲ್ಪ್ ಲೈನ್ ಎಂಬ ಹೆಸರಿನ ಆ್ಯಪ್ ಇಲ್ಲಿ ಸಿದ್ಧವಾಗಿದೆ. ಚುನಾವಣೆ ಆಯೋಗದ ಡೈನಾಮಿಕ್ ಪೆÇೀರ್ಟಲ್‍ನಿಂದಲೂ ಯಥಾ ಸಮಯದ ಡಾಟಾ ಈ ಮೂಲಕ ಲಭ್ಯವಿದೆ.
ಮತದಾನಕ್ಕೆ ಪೆÇ್ರೀತ್ಸಾಹ, ಜಾಗೃತಿ ಮೂಡಿಸುವ ವಿಚಾರಗಳನ್ನು ಒಂದೇ ಛಾವಣಿಯಡಿ ನೀಡುವ ಉದ್ದೇಶ ಇಲ್ಲಿದೆ. ಚುನಾವಣೆ ಪ್ರಕ್ರಿಯೆಗಳನ್ನು ಡಿಜಿಟಲೈಸೇಶನ್ ನಡೆಸುವ ಯೋಜನೆ ಅಂಗವಾಗಿ ಆ್ಯಪ್ ಸಿದ್ಧವಾಗಿದೆ. ಜನತೆ ಗುರುತು ಚೀಟಿಗಾಗಿ ನೋಂದಣಿ ನಡೆಸುವ, ಇತರ ರಾಜ್ಯಗಳಿಗೆ ವಸತಿ ಬದಲಿಸಿಕೊಂಡರೆ ಚುನಾವಣೆ ಕಚೇರಿ, ಮತಗಟ್ಟೆ ಸಂದರ್ಶಿಸದೇ ವಿಳಾಸ ಬದಲಿಸುವುದು ಈ ಮೂಲಕ ಸುಲಭ ಸಾಧ್ಯ.
ನೂತನ ಮತದಾತರ ನೋಂದಣಿ ಸಂಬಂಧ ಚುನಾವಣೆ ಫಾರಂಗಳ ಭರ್ತಿಗೊಳಿಸುವಿಕೆ, ಇತರ ವಿಧಾನಸಭೆ ಕ್ಷೇತ್ರಕ್ಕೆ ವಸತಿ ಬದಲಿಸುವ ವೇಳೆಗಿನ ವಿಚಾರಗಳು, ಆನಿವಾಸಿ ಭಾರತೀಯರಿಗೆ ಸಂಬಂಧಿಸಿದ ಸೇವೆಗಳು, ಮತದಾತರ ಪಟ್ಟಿಯಿಂದ ಹೆಸರು ರದ್ದುಗೊಳಿಸುವಿಕೆ, ಈ ಸಂಬಂಧ ವಿರೋಧ ಪ್ರಕಟಿಸುವಿಕೆ, ಎಂಟ್ರಿಗಳ ತಿದ್ದುಪಡಿ ಇತ್ಯಾದಿಗಳೂ ಈ ಮೂಲಕ ಸಾಧ್ಯ.
ವಿಧಾನಸಭೆ ಕ್ಷೇತ್ರದಿಂದ ಟ್ರಾನ್ಸ್ ಪೆÇಸಿಶನ್ ನಡೆಸಲು ಆಯಾ ಒಂದು ವಿಧಾನಸಭೆ ಕ್ಷೇತ್ರದ ಚುನಾವಣೆ ಪಟ್ಟಿಯ ಒಂದು ಎಂಟ್ರಿ ಅದೇ ಪಟ್ಟಿಯ ಇನ್ನೊಂದು ಭಾಗಕ್ಕೆ ಮೀಸಲುಗೊಳಿಸಲು ಈ ಆ್ಯಪ್ ಮೂಲಕ ಸಾಧ್ಯ. ಮತಗಟ್ಟೆ ಸಂಬಂಧ ಯಾವುದೇ ಸಂಶಯಗಳಿದ್ದರೆ, ಚುನಾವಣೆ ಸಂಹಿತೆ ಸಂಬಂಧ ಮಾಹಿತಿಗಳು ಬೇಕಿದ್ದರೆ, ಮತಯಂತ್ರಗಳ ಸಂಬಂಧ ವಿಚಾರಗಳು, ಆಯಾ ಸಂದರ್ಭಕ್ಕೆ ಚುನಾವಣೆ ಆಯೋಗ ಪ್ರಕಟಿಸುವ ಸೂಚನೆಗಳು, ಈ ಮೂಲಕ ದೊರೆಯಲಿವೆ.
ಇವಲ್ಲದೆ ಚುನಾವಣೆ ಚಟುವಟಿಕೆಗಳ ಸಂಬಂಧ ದೂರುಗಳಿದ್ದಲ್ಲಿ, ಅದರ ನೋಂದಣಿ, ಅದರ ಡಿಸ್ಪೋಸಲ್ ಸ್ಟಾಟಸ್ ಟ್ರಾಕ್ ನಡೆಸಲೂ ಸಾಧ್ಯ. ಮತದಾರರಿಗೆ ಬೇಕಾದ ಇತರ ಅನಿವಾರ್ಯ ಮಾಹಿತಿ ಇದರಲ್ಲಿ ಅಡಕವಾಗಿದೆ. ಗೂಗಲ್ ಪ್ಲೇ ಸ್ಟೋರ್‍ನಲ್ಲಿ ವೋಟರ್ ಹೆಲ್ಪ್ ಲೈನ್ ಎಂಬ ಇ-ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಬಹುದು.