ಕುಂಬಳೆ: : ಕಣಿಪುರ ಶ್ರೀ ಗೋಪಾಲಕೃಷ್ಣ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ನಡುದೀಪೋತ್ಸವದ ದಿನವಾದ ಬುಧವಾರ ಬೆಳಿಗ್ಗೆ 6 ರಿಂದ ಉತ್ಸವ ಶ್ರೀ ಭೂತಬಲಿ, 8 ರಿಂದ 9.30ರ ವರೆಗೆ ಭಜನಾ ಸಂಕೀರ್ತನೆ, 10.30 ರಿಂದ ತುಲಾಭಾರ ಸೇವೆ ನಡೆಯಿತು. 12.30ಕ್ಕೆ ಮಹಾಪೂಜೆ, ನಿತ್ಯಬಲಿ, ಅನ್ನದಾನಗಳು ನಡೆದವು. ಸಂಜೆ 4.30ಕ್ಕೆ ನಡೆ ತೆರೆದು,6.30ಕ್ಕೆ ವಿಶ್ವರೂಪ ದರ್ಶನ ನೆರವೇರಿತು. ಈ ಸಂದರ್ಭ ಸಾವಿರಾರು ಭಕ್ತರು ಪಾಲ್ಗೊಂಡು ಪುನೀತರಾದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕುಂಬಳೆಯ ಜಿಎಸ್‍ಬಿ ಯುವಕ ಸಂಘದ ಪ್ರಾಯೋಜಕತ್ವದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಬಾಲ ಗಾಯಕಿ ಸೂರ್ಯ ಗಾಯತ್ರೀ ಇವರಿಂದ ಭಕ್ತಿಸಂಗೀತ ಕಾರ್ಯಕ್ರಮ ನಡೆಯಿತು. ರಾತ್ರಿ 9ಕ್ಕೆ ನಡು ದೀಪೋತ್ಸವ, ಶ್ರೀ ಬಲಿ, ಪೂಜೆ ನಡೆಯಿತು.
ಗುರುವಾರ ಬೆಳಿಗ್ಗೆ 6 ರಿಂದ ಉತ್ಸವ ಶ್ರೀ ಭೂತಬಲಿ, 8 ರಿಂದ 9.30ರ ವರೆಗೆ ಮಧೂರಿನ ರಾಗಸುಧಾ ಭಜನಾಮೃತಂ ತಂಡದವರಿಂದ ಭಜನಾ ಸಂಕೀರ್ತನೆ ನಡೆಯಿತು. 10.30 ರಿಂದ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ನಿತ್ಯಬಲಿ, ಅನ್ನದಾನಗಳು ನಡೆದವು. ಸಂಜೆ 4.ಕ್ಕೆ ನಡೆ ತೆರೆದು ,ಬಳಿಕ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕುಂಬಳೆಯ ನಾಟ್ಯನಿಲಯದ ವಿದ್ಯಾಲಕ್ಷ್ಮೀ ಕೆ. ಬಳಗದವರಿಂದ ನೃತ್ಯ ಸಂಭ್ರಮ ಪ್ರದರ್ಶನಗೊಂಡಿತು. ಸಂಜೆ 6ಕ್ಕೆ ತಾಯಂಬಕ, 6.30ಕ್ಕೆ ದೀಪಾರಾಧನೆ, 8.30 ರಿಂದ ಶ್ರೀ ಬಲಿ ಉತ್ಸವ, ರಾತ್ರಿ 9.45 ರಿಂದ ಐತಿಹಾಸಿಕ ವಿಶೇಷ ಬೆಡಿ ಪ್ರದರ್ಶನ ಕುಂಬಳೆ ಗಾಂಧೀ ಮೈದಾನದ ಸಮೀಪವಿರುವ ಪಾರಂಪರಿಕ ಪರಿಸರದಲ್ಲಿ ನಡೆಯಿತು. ಮುಂಜಾನೆ 2.45 ರಿಂದ ಶಯನ, ಕವಾಟ ಬಂಧನ ನಡೆಯಿತು.
ಇಂದು (ಜ.18ರಂದು) ಬೆಳಿಗ್ಗೆ 6ಕ್ಕೆ ಕವಾಟೋದ್ಘಾಟನೆ, 9.30 ರಿಂದ ಕುಂಬಳೆಯ ಶ್ರೀಸತ್ಯಸಾಯಿ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, 10.30 ರಿಂದ ತುಲಾಭಾರ ಸೇವೆ, ಮಹಾಪೂಜೆ, ಅನ್ನದಾನಗಳು ನಡೆಯಲಿವೆ. ಸಂಜೆ 4.30ಕ್ಕೆ ನಡೆತೆರೆದು, 6.30 ರಿಂದ ದೀಪಾರಾಧನೆ ನಡೆಯಲಿದೆ. ಸಂಜೆ 4.30ರಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಕುಂಬಳೆ ಘಟಕದ ವತಿಯಿಂದ ಯಕ್ಷಗಾನ ವೈಭವ ನಡೆಯಲಿರುವುದು. ರಾತ್ರಿ 8.30 ರಿಂದ ಉತ್ಸವ ಶ್ರೀಬಲಿ, ಘೋಷಯಾತ್ರೆ, ಶೇಡಿಗುಮ್ಮೆಗೆ ತೆರಳಿ ಅವಭೃತ ಸ್ನಾನ, ಮಧ್ಯರಾತ್ರಿ 12.30 ರಿಂದ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣದೊಂದಿಗೆ ವಾರ್ಷಿಕ ಉತ್ಸವ ಸಮಾರೋಪಗೊಳ್ಳಲಿದೆ.