HEALTH TIPS

ಎಂಡೋ ಸಂತ್ರಸ್ತರ ನಿರ್ಲಕ್ಷ್ಯ ವಿರುದ್ಧ ಹೋರಾಟ

Top Post Ad

Click to join Samarasasudhi Official Whatsapp Group

Qries

Qries
   
          ಕಾಸರಗೋಡು: ಎಂಡೋಸಲಾನ್ ಸಂತ್ರಸ್ತರ ಬಗ್ಗೆ  ಕೇರಳ ರಾಜ್ಯ ಸರಕಾರವು ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ವಿರುದ್ಧ  ತಿರುವನಂತಪುರ ಸೆಕ್ರೆಟರಿಯೇಟ್ ಮುಂಭಾಗ ಎಂಡೋಸಲಾನ್ ಸಂತ್ರಸ್ತ  ಜನಪರ ಹೋರಾಟ ಸಮಿತಿಯ ನೇತೃತ್ವದಲ್ಲಿ ಜ.30ರಿಂದ ನಡೆಯಲಿರುವ ಅನಿರ್ದಿಷ್ಟಾವ„ ಸತ್ಯಾಗ್ರಹದಲ್ಲಿ ಭಾಗವಹಿಸುವುದಾಗಿ ಪ್ರಸಿದ್ಧ  ಸಮಾಜ ಸೇವಕಿ ದಯಾಬಾಯಿ ಹೇಳಿದ್ದಾರೆ.
      ಎಂಡೋಸಲ್ಪಾನ್ ಸಂತ್ರಸ್ತರ ಮನೆಗೆ ಭೇಟಿ ನೀಡಿದ್ದ  ಸಂದರ್ಭ ನನಗೆ ದಯನೀಯವಾದ ದೃಶ್ಯಗಳನ್ನು  ಕಾಣುವಂತಾಯಿತು. ಇವರಿಗೆ ಸಹಾಯ ಒದಗಿಸಲು ಅಧಿಕಾರಿಗಳು ನ್ಯಾಯಯುತವಾದ ತೀರ್ಮಾನಗಳನ್ನು  ಕೈಗೊಳ್ಳುತ್ತಿಲ್ಲ. ಅಸಹಾಯಕರಾದವರು ಇಲ್ಲಿ  ಬದುಕುವುದು ತಪ್ಪೇ ಎಂದವರು ಪ್ರಶ್ನಿಸಿದ್ದಾರೆ.
        2017ರಲ್ಲಿ  ಕಾಸರಗೋಡಿನ ಎಂಡೋಸಲಾನ್ ಸಂತ್ರಸ್ತರಿಗೆ ಐದು ಲಕ್ಷ  ರೂ. ಹಾಗೂ ಜೀವನ ಪರ್ಯಂತ ಚಿಕಿತ್ಸೆ  ನೀಡಬೇಕು ಎಂದು ಸುಪ್ರಿಂಕೋರ್ಟ್ ಸ್ಪಷ್ಟ  ಆದೇಶ ನೀಡಿತ್ತು. ಆದರೆ ಸರಕಾರಿ ಕಚೇರಿಗಳಿಗೆ ಸವಲತ್ತುಗಳಿಗಾಗಿ ಹತ್ತಿ ಇಳಿದು ಮಾಡಿದಾಗ ಸಂತ್ರಸ್ತರಿಗೆ ಕಡೆಗಣನೆಯಷ್ಟೇ ಲಭಿಸಿದೆ ಎಂದು ಅವರು ಬೊಟ್ಟು ಮಾಡಿದರು.
   ಹಲವು ಶಕ್ತಿಗಳು ಎಂಡೋಸಲ್ಪಾನ್ ಸಮಸ್ಯೆಗಳನ್ನು  ಮುಚ್ಚಿಹಾಕಲು ಯತ್ನಿಸುತ್ತಿವೆ. ದುರಂತ ಬಾಧಿತರ ಹಕ್ಕುಗಳನ್ನು  ತಡೆಗಟ್ಟುವಲ್ಲಿ  ಎಂಡೋ ಕಂಪೆನಿ ಪಾತ್ರ ಕೂಡ ಇದೆ ಎಂಬ ಬಗ್ಗೆ  ಶಂಕೆ ವ್ಯಕ್ತಗೊಳ್ಳುತ್ತಿದೆ ಎಂದರು. ಪ್ರತ್ಯೇಕ ವೈದ್ಯಕೀಯ ಶಿಬಿರದಲ್ಲಿ  ಗುರುತಿಸಿದ ಅರ್ಹರಾದ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ  ಮೊದಲಾದ ಸಹಾಯಗಳನ್ನು  ಕೂಡಲೇ ಮಂಜೂರುಗೊಳಿಸಬೇಕು ಎಂದು ದಯಾಬಾಯಿ ಆಗ್ರಹಿಸಿದ್ದಾರೆ.
      2010ರಲ್ಲಿ  ಮಾನವ ಹಕ್ಕು ಆಯೋಗವು ಕೇಂದ್ರ ಮತ್ತು  ರಾಜ್ಯ ಸರಕಾರಗಳಿಗೆ ನೀಡಿದ್ದ  ನಿರ್ದೇಶನಗಳನ್ನು  ಜಾರಿಗೊಳಿಸಬೇಕು, ಸಂತ್ರಸ್ತರಿಗೆ ಅಗತ್ಯದ ಚಿಕಿತ್ಸೆಯನ್ನು ಆಯಾ ಜಿಲ್ಲೆಗಳಲ್ಲಿ  ನೀಡಲು ವ್ಯವಸ್ಥೆ  ಮಾಡಬೇಕು, ಪುನರ್ವಸತಿ ಚಟುವಟಿಕೆಗಳು ಹಾಗೂ ಪಡಿತರ ವ್ಯವಸ್ಥೆಗಳನ್ನು ಮರು ಸ್ಥಾಪಿಸಬೇಕು, ಸಂತ್ರಸ್ತರ ಕುಟುಂಬದ ಒಬ್ಬ ಸದಸ್ಯನಿಗೆ ಸರಕಾರಿ ನೌಕರಿ ನೀಡಬೇಕು, ಪಿಂಚಣಿ ಮೊತ್ತವನ್ನು  5,000ರೂ. ಆಗಿ ಹೆಚ್ಚಿಸಬೇಕು ಮುಂತಾದ ಬೇಡಿಕೆಗಳನ್ನು  ಮುಂದಿಟ್ಟುಕೊಂಡು ಸೆಕ್ರೆಟರಿಯೇಟ್ ಮುಂಭಾಗ ಅನಿರ್ದಿಷ್ಟಾವ„ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries