ನವದೆಹಲಿ: ಸಿಬಿಐ ಮಾಜಿ ನಿರ್ದೇಶಕ ಅಲೋಕ್ ವರ್ಮಾ ಸರ್ಕಾರಿ ಸೇವೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಗುರುವಾರವಷ್ಟೇ ಅಲೋಕ್ ವರ್ಮಾ ಅವರನ್ನು ಸಿಬಿಐ ಮುಖ್ಯಸ್ಥನ ಹುದ್ದೆಯಿಂದ ಅಗ್ನಿಶಾಮಕ ದಳದ ಡಿಜಿ ಆಗಿ ವರ್ಗಾವಣೆ ಮಾಡಿತ್ತು. ಇದರ ಬೆನ್ನಲ್ಲೇ ವರ್ಮಾ ರಾಜೀನಾಮೆ ಸಲ್ಲಿಸಿದ್ದಾರೆ.
ಪ್ರಧಾನಿ ನೇತೃತ್ವದ ಸಮಿತಿ ಅಲೋಕ್ ವರ್ಮಾ ಅವರನ್ನು ಅಗ್ನಿಶಾಮಕ ದಳದ ಪ್ರಧಾನ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಿ ಆದೇಶಿಸಿತ್ತು.
ಪಿಟಿಐಗೆ ಸಿಕ್ಕಿರುವ ವರ್ಮಾ ರಾಜೀನಾಮೆ ಪತ್ರದಲ್ಲಿ ಅವರು "ಇದೊಂದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ" ಎಂದಿದಾರೆ.
ಈ ಹಿಂದೆ ಕೇಂದ್ರೀಯ ತನಿಇಖಾ ದಳದಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದ ತರುವಾಯ ಕೇಂದ್ರ ಸರ್ಕಾರ ಅಲೋಕ್ ವರ್ಮಾ ಹಾಗೂ ಅವರ ಸಹವರ್ತಿ ರಾಕೇಶ್ ಅಸ್ತಾನ ಅವರುಗಳನ್ನು ಸುದೀರ್ಘಾವಧಿಯ ಕಡ್ಡಾಯ ರಜೆ ಮೇಲೆ ಕಳಿಸಿತ್ತು. ಆದರೆ ಸರ್ಕಾರದ ಈ ಕ್ರ್ಮ ಪ್ರಶ್ನಿಸಿ ಅಲೋಕ್ ವರ್ಮಾ ಸುಪ್ರೀಂ ಮೊರೆ ಹೋಗಿದ್ದರು.
ಇದೇ ಎಂಟರಂದು ತೀರ್ಪು ನಿಡಿದ್ದ ಸುಪ್ರೀಂಕೇಂದ್ರದ ಆದೇಶವನ್ನು ತಿರಸ್ಕರಿಸಿ ಮತ್ತೆ ಅಲೋಕ್ ವರ್ಮಾ ಅವರನ್ನೇ ಸಿಬಿಐ ಮುಖ್ಯಸ್ಥನ ಹುದ್ದೆಗೆ ನೇಮಕ ಮಾಡಬೇಕೆಂದು ಆದೇಶಿಸಿತ್ತು. ಇದರಂತೆ ವರ್ಮಾ ಸಿಬಿಐ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಆಯ್ಕೆ ಸಮಿತಿ ಅವರನ್ನು ವರ್ಗಾವಣೆಗೊಳಿಸಿದೆ.
ಅಲೋಕ್ ವರ್ಮಾ ಸೇವಾವಧಿ ಜನವರಿ 31, 2019 ವರೆಗೆ ಇದ್ದು ಅಂದು ಅವರು ನಿವೃತ್ತರಾಗುವವರಿದ್ದರು.
ಇನ್ನೊಂದೆಡೆ ಅಲೋಕ್ ವರ್ಮಾ ವರ್ಗಾವಣೆಯುಇಂದ ತೆರವಾದ ಸ್ಥಾನಕ್ಕೆ ಇಂದು ಮತ್ತೆ ಹಂಗಾಮಿ ನಿರ್ದೇಶಕರಾಗಿ ಹೆಚ್ಚುವರಿ ನಿರ್ದೇಶಕ ಎಂ. ನಾಗೇಶ್ವರರಾವ್ ನೇಮಕ ಆಗಿದ್ದಾರೆ.