ಮಂಜೇಶ್ವರ: ಕೇರಳ ಸಮಾಜಂ ಮಂಗಳೂರಿನಲ್ಲಿ ಆಯೋಜಿಸಿದ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹೆಸರಾಂತ ನಾಟ್ಯಗುರು ಕಲಾತಪಸ್ವಿ ಬಾಲಕೃಷ್ಣ ಮಾಸ್ತರ್ ನಾಟ್ಯನಿಲಯಂ ಮಂಜೇಶ್ವರ ಇವರನ್ನು ಸಂಗೀತ ಸಾಮ್ರಾಟ, ಗಾನ ಗಂಧರ್ವ ಕೆ.ಜೆ.ಏಸುದಾಸ್ ಅಭಿನಂದಿಸಿದರು. ಬಾಲಕೃಷ್ಣ ಮಾಸ್ತರ್ ಅವರು ಹಲವಾರು ವರ್ಷಗಳಿಂದ ಕೇರಳ ಸಮಾಜಂ ಸಹಿತ ಹಲವಾರು ಕಡೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣವನ್ನು ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ್, ಕೇರಳ ಸಮಾಜಂನ ಅಧ್ಯಕ್ಷ ಪಿ.ವಿ.ರಾಜನ್ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕೆ.ಜೆ.ಏಸುದಾಸರಿಂದ ಬಾಲಕೃಷ್ಣ ಮಾಸ್ತರಿಗೆ ಅಭಿನಂದನೆ
0
ಜನವರಿ 13, 2019