ಮಂಜೇಶ್ವರ: ಕುಳೂರಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಅವರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಕಂಚಿಲರವರಿಗೆ ಆಮಂತ್ರಣ ಪತ್ರಿಕೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಪ್ರೇಮ ಜಿ ಶೆಟ್ಟಿ, ಮಾತೃ ಮಂಡಳಿ ಅಧ್ಯಕ್ಷೆ ಆಶಾಲತ ಕುಳೂರು, ಉಪಾಧ್ಯಕ್ಷೆ ಸುನೀತ ಕುಳೂರು, ಶಾಲಾಭಿವೃದ್ಧಿ ಸಮಿತಿ ಸದಸ್ಯ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಕೃಷ್ಣವೇಣಿ ಪಾದೆ ಕುಳೂರು, ಪ್ರಧಾನ ಕಾರ್ಯದರ್ಶಿ ಹರಿರಾಮ ಕುಳೂರು, ಜೊತೆ ಕಾರ್ಯದರ್ಶಿ ವಸಂತ ಪೂಜಾರಿ ಕುಳೂರು, ಸದಸ್ಯರಾದ ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ, ಜಯರಾಜ್ ಶೆಟ್ಟಿ ಚಾರ್ಲ, ರಫೀಕ್ ಪೊಯ್ಯೆಲ್, ಶಶಿಕುಮಾರ್ ಕುಳೂರು, ಶಾಲಾ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ, ಸೌಮ್ಯ ಪಿ, ನಯನ ಎಂ ಉಪಸ್ಥಿತರಿದ್ದರು.