ಉಪ್ಪಳ: ಭಾರತೀಯ ಮಜ್ದೂರ್ ಸಂಘ(ಬಿಎಂಎಸ್) ಪೈವಳಿಕೆ ಪಂಚಾಯತಿ ಘಟಕ ಹಾಗೂ ಮಹಿಳಾ ಮತ್ತು ಪುರುಷ ಕಾರ್ಮಿಕರು ಕ್ಯಾಂಪ್ಕೋ ,ಬಾಯಾರು ಇವರ ವತಿಯಿಂದ ತಲೆಹೊರೆ ವೃತ್ತಿಯಿಂದ ನಿವೃತ್ತಿ ಹೊಂದುತ್ತಿರುವ ಶಾರದ ಅವರ ಬೀಳ್ಕೊಡುಗೆ ಸಮಾರಂಭವು ಇತ್ತೀಚೆಗೆ ಕ್ಯಾಂಪ್ಕೋ ,ಬಾಯಾರಿನ ಶಾಖೆಯಲ್ಲಿ ನಡೆಯಿತು.
ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ನಿರ್ದೇಶಕ ಶಂಕರನಾರಾಯಣ ಭಟ್ ಕಿದೂರು ವಹಿಸಿದ್ದರು. ಕ್ಯಾಂಪ್ಕೋದ ಮಾಜಿ ನಿರ್ದೇಶಕ ಕುರುವೇರಿ ಕೃಷ್ಣ ಭಟ್, ಹಾಗೂ ಶಾಖಾಧಿಕಾರಿ ಶ್ರೀಧರ ಉಪಸ್ಥಿತರಿದ್ದರು. ಬಿಎಂಎಸ್ ವಲಯಾಧ್ಯಕ್ಷ ದಿನೇಶ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಶ್ರೀಲತ ಸ್ವಾಗತಿಸಿ, ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೂಪಲಕ್ಷ್ಮಿ ಅವರು ಅಭಿನಂದನಾ ಪತ್ರ ವಾಚಿಸಿದರು. ಗೀತ ಬದಿಯಾರು ವಂದಿಸಿದರು. ಸಂಧ್ಯಾ ಅಶೋಕ್ ಬದಿಯಾರು ಪ್ರಾರ್ಥಿಸಿದರು. ಕೃಷ್ಣ ಕೆ ನಿರ್ವಹಿಸಿದರು.