ಕುಂಬಳೆ: ಪ್ರಸಿದ್ದ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಎರಡನೇ ದಿನವಾದ ಮಂಗಳವಾರ ವಿವಿಧ ವೈದಿಕ,ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿತು.
ಬೆಳಿಗ್ಗೆ6 ರಿಂದ ಉತ್ಸವ ಶ್ರೀಭೂತಬಲಿ, 8 ರಿಂದ 9.30ರ ವರೆಗೆ ಭಜನಾ ಸಂಕೀರ್ತನೆ, 10.30 ರಿಂದತುಲಾಭಾರ ಸೇವೆ ನಡೆಯಿತು. 12.30ಕ್ಕೆ ಮಹಾಪೂಜೆ, ನಿತ್ಯಬಲಿ, ಅನ್ನದಾನ ನಡೆಯಿತು. ಸಂಜೆ 4.30ಕ್ಕೆ ನಡೆ ತೆರೆದು 6.30ಕ್ಕೆ ದೀಪಾರಾಧನೆ, ಕೇಳಿಕೊಟ್ಟು ಸೇವೆ, ಯಕ್ಷಗಾನ ತಾಳಮದ್ದಳೆ ನಡೆಯಿತು. 8.30 ರಿಂದ ಸಣ್ಣ ದೀಪೋತ್ಸವ, ಶ್ರೀಬಲಿ, ಪೂಜೆ, 11.30 ರಿಂದ ಕಟೀಲು ಶ್ರೀದುರ್ಗಾಪರಮೇಶ್ವರಿ ಮೇಳದವರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಸೋಮವಾರ ಸಂಜೆ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಕೊಂಡೆವೂರಿನ ಭಾರತೀ ಸವಿಜೀವನಂ ನಾಟ್ಯಾಲಯದವರಿಂದ ಭರತನಾಟ್ಯ, ಶ್ರೀಮತಿ ಕೆ. ಭಟ್ ಪುದ್ಯೋಡು ಬಳಗದವರಿಂದ ಶಾಸ್ತ್ರೀಯ ಸಂಗೀತ ಕಚೇರಿ, ರಾತ್ರಿ 8.30 ರಿಂದ ಉತ್ಸವ ಬಲಿ, ರಂಗಪೂಜೆ ನಡೆಯಿತು.
ಇಂದಿನ ಕಾರ್ಯಕ್ರಮ:
ಬುಧವಾರ ಬೆಳಿಗ್ಗೆ 6 ರಿಂದ ಉತ್ಸವ ಶ್ರೀಭೂತಬಲಿ, 8 ರಿಂದ 9.30ರ ವರೆಗೆ ಭಜನಾ ಸಂಕೀರ್ತನೆ, 10.30 ರಿಂದ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ನಿತ್ಯಬಲಿ, ಅನ್ನದಾನ, ಸಂಜೆ 4.30ಕ್ಕೆ ನಡೆ ತೆರೆಯುವುದು,6.30ಕ್ಕೆ ವಿಶ್ವರೂಪ ದರ್ಶನ, ಬಾಲ ಯುವ ಗಾಯಕಿ ಸೂರ್ಯ ಗಾಯತ್ರೀ ಇವರಿಂದ ಭಕ್ತಿಸಂಗೀತ ಕಾರ್ಯಕ್ರಮ, ರಾತ್ರಿ 9ಕ್ಕೆ ನಡು ದೀಪೋತ್ಸವ, ಶ್ರೀಬಲಿ, ಪೂಜೆ ನಡೆಯಲಿದೆ.
ಜ.17 ರಂದು ಗುರುವಾರ ಬೆಳಿಗ್ಗೆ 6 ರಿಂದ ಉತ್ಸವ ಶ್ರೀಭೂತಬಲಿ, 8 ರಿಂದ 9.30ರ ವರೆಗೆ ಭಜನಾ ಸಂಕೀರ್ತನೆ, 10.30 ರಿಂದ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ನಿತ್ಯಬಲಿ, ಅನ್ನದಾನ, ಸಂಜೆ 4.ಕ್ಕೆ ನಡೆ ತೆರೆಯುವುದು, ಕುಂಬಳೆಯ ನಾಟ್ಯನಿಲಯದ ವಿದ್ಯಾಲಕ್ಷ್ಮೀ ಕೆ. ಬಳಗದವರಿಂದ ನೃತ್ಯ ಸಂಭ್ರಮ, ಸಂಜೆ 6ಕ್ಕೆ ತಾಯಂಬಕ, 6.30ಕ್ಕೆ ದೀಪಾರಾಧನೆ, 8.30 ರಿಂದ ಶ್ರೀಬಲಿ ಉತ್ಸವ, ರಾತ್ರಿ 9.45 ರಿಂದ ಐತಿಹಾಸಿಕ ವಿಶೇಷ ಬೆಡಿ ಪ್ರದರ್ಶನ, ಮುಂಜಾನೆ 2.45 ರಿಂದ ಶಯನ, ಕವಾಟ ಬಂಧನ ನಡೆಯಲಿದೆ.
ನೂತನ ಬೇತಾಳ(ತಟ್ಟಿರಾಯ ಸಮರ್ಪಣೆ)
ಶ್ರೀಕ್ಷೇತ್ರದ ಜಾತ್ರೋತ್ಸವದ ಆಕರ್ಷಣೆಗಳಲ್ಲಿ ಒಂದಾದ ಬೇತಾಳನ ಹೊಸ ಪ್ರತಿಮೆಯನ್ನು ಭಾನುವಾರ ಶ್ರೀಕ್ಷೇತ್ರಕ್ಕೆ ಸಮಪಿಸಲಾಯಿತು. ಪುತ್ತೂರಿನ ಭಾವನಾ ಆಟ್ರ್ಸ್ ನಿರ್ಮಿಸಿದ ನೂತನ ಬೇತಾಳವು ಅತ್ಯಪೂರ್ವವಾಗಿ ಗಮನ ಸೆಳೆಯುತ್ತಿದೆ. ಶ್ರೀಕ್ಷೇತ್ರದ ವತಿಯಿಂದ ಭಾವನಾ ಆಟ್ರ್ಸ್ ಮಾಲಕ ವಿಘ್ನೇಶ್ ಪುತ್ತೂರು ಅವರನ್ನು ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು.