ಕಾಸರಗೋಡು: ಅದೆಷ್ಟೋ ಕೊಂಕಣಿ ಭಾಷೆಯ ಪ್ರತಿಭೆಗಳು ಸೂಕ್ತ ವೇದಿಕೆಗಳಿಲ್ಲದೆ ಮುದುಡಿ ಹೋಗುತ್ತಿದೆ. ಅಂತಹ ಸಂದರ್ಭದಲ್ಲಿ `ಕೊಂಕಣಿ ಎದುರು ಕಾಣಸಣಿ' ಯಂಥಹ ವೇದಿಕೆಗಳು ಇಂತಹ ಕೊರತೆಯನ್ನು ನೀಗಿಸಿದೆ ಎಂದು ಕೊಂಕಣಿ ಸಾಂಸ್ಕøತಿಕ ಸಂಘ ಮಂಗಳೂರು ಇದರ ಅಧ್ಯಕ್ಷರೂ, ಖ್ಯಾತ ಲೆಕ್ಕಪರಿಶೋಧಕರೂ ಆಗಿರುವ ಎಂ.ವಿಠಲ ಕುಡುವಾ ಹೇಳಿದರು.
ಅವರು ಕಾಸರಗೋಡಿನ ಸಾಂಸ್ಕøತಿಕ ಹಾಗು ಸಾಹಿತ್ಯಿಕ ಸಂಸ್ಥೆ ರಂಗಚಿನ್ನಾರಿ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು, ಕೊಂಕಣಿ ಸಾಂಸ್ಕøತಿಕ ಸಂಘ ಮಂಗಳೂರು, ಜಿ.ಎಸ್.ಬಿ. ಮಹಿಳಾ ಸಂಘ ಕಾಸರಗೋಡು ಇದರ ಸಹಯೋಗದೊಂದಿಗೆ `ಪದ್ಮಗಿರಿ ಕಲಾ ಕುಟೀರ'ದಲ್ಲಿ ಏರ್ಪಡಿಸಿದ ಅಂತಾರಾಜ್ಯ ಮಟ್ಟದ `ಕೊಂಕಣಿ ಎದುರು ಕಾಣಸಣಿ' ಸಾಂಸ್ಕøತಿಕ ವಿನಿಮಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇರಳ ಮತ್ತು ಕರ್ನಾಟಕ ರಾಜ್ಯದ ಸಾಂಸ್ಕøತಿಕ-ಸಾಹಿತ್ಯಿಕ ಮನಸ್ಸುಗಳು ಮತ್ತಷ್ಟು ಹತ್ತಿರವಾಗಬೇಕಾದ ಅನಿವಾರ್ಯತೆಯನ್ನು ಹೇಳಿದರಲ್ಲದೆ, ಇದೇ ಮೊದಲ ಬಾರಿಗೆ ಈ ಬಗ್ಗೆ ಮುತುವರ್ಜಿ ವಹಿಸಿದ ರಂಗಚಿನ್ನಾರಿಯನ್ನು ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಎಂ.ಆರ್.ಕಾಮತ್ ಅವರು ಮಾತನಾಡಿ ಮಾತೃ ಭಾಷೆಯ ಔಚಿತ್ಯ ಮತ್ತು ಭಾಷಿಕರು ಮಾಡಬೇಕಾದ ಚಟುವಟಿಕೆಗಳ ಬಗ್ಗೆ ವಿಸ್ತಾರವಾಗಿ ಹೇಳಿದರು. `ಕೊಂಕಣಿ ಎದುರು ಕಾಣಸಣಿ' ಕಾರ್ಯಕ್ರಮ ಈ ನಿಟ್ಟಿನಲ್ಲಿ ಹೊಸ ಆಯಾಮ ಸೃಷ್ಟಿ ಮಾಡಿದೆ ಎಂದರು.
ಕಾರ್ಯಕ್ರಮವನ್ನು ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅಶೋಕ ಶೆಣೈ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಜಿ.ಎಸ್.ಬಿ. ಮಹಿಳಾ ಸಂಘದ ಪದಾಧಿಕಾರಿ ಮೀರಾ ಕಾಮತ್, ಖ್ಯಾತ ಸಾಹಿತಿ ಜ್ಯೋತಿಪ್ರಭಾ ಎಸ್.ರಾವ್, ಸಾಂಸ್ಕøತಿಕ ಸಂಘದ ಕಾರ್ಯದರ್ಶಿ ಸಂತೋಷ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಂಗಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಸಂಸ್ಥೆಯ ಬೆಳವಣಿಗೆಯ ಹಾಗು ಚಟುವಟಿಕೆಗಳ ಬಗ್ಗೆ ತಿಳಿಸಿ `ಕೊಂಕಣಿ ಎದುರು ಕಾಣಸಣಿ' ಕಾರ್ಯಕ್ರಮ ಎರಡು ರಾಜ್ಯಗಳ ಸಾಹಿತಿ-ಕಲಾವಿದರನ್ನು ಮತ್ತಷ್ಟು ಹತ್ತಿರ ಮಾಡುವಲ್ಲಿ ಸಫಲವಾಗಿದೆ ಎಂದರಲ್ಲದೆ, ಮುಂದಿನ ದಿನಗಳಲ್ಲಿ ಇಲ್ಲಿನ ಕೊಂಕಣಿ ಕಲಾವಿದರನ್ನು ಕರ್ನಾಟಕಕ್ಕೆ ಪರಿಚಯಿಸುವ ಕಾರ್ಯವನ್ನು ತಿಳಿಸಿದರು.
ಜಿ.ಎಸ್.ಬಿ. ಮಹಿಳಾ ಸಂಘದ ಕಲಾವಿದರಾದ ಮಾಯಾ ಎಂ.ನಾಯಕ್, ಸಿ.ಮೀರಾ ಕಾಮತ್, ಗೀತಾ ಎಂ.ಶೆಣೈ, ರಜನಿ ಆರ್.ಕಾಮತ್, ರಕ್ಷಾ ಕಾಮತ್, ತಾರಾ ಜಿ.ಕಾಮತ್ ಹಾಗು ಕೊಂಕಣಿ ಸಾಂಸ್ಕøತಿಕ ಸಂಘದ ಗ್ರೀಷ್ಮಾ ಕಿಣಿ, ಮೇಘಾ ಪೈ, ವಿಘ್ನೇಶ್ ಕಾಮತ್, ಅರುಣ ಜಿ.ಶೇಟ್, ರತ್ನಾಕರ ಕುಡ್ವಾ, ಗೋವಿಂದ ರಾಯ ಪ್ರಭು, ಗಜಾನನ ಶೆಣೈ, ಪ್ರಭಾ ಭಟ್, ಟಿ.ಜಿ.ಶೆಣೈ ಮುಂತಾದವರು ಕವನ, ಹಾಡು, ಕಥಾವಾಚನ, ಸಾಂಸ್ಕøತಿಕ ಕಾರ್ಯಕ್ರಮ ನೀಡಿ ರಂಜಿಸಿದರು.
ಮಂಗಳೂರು ಆಕಾಶವಾಣಿಯ ಮಾಜಿ ಉದ್ಘೋಷಕಿ ಶಕುಂತಳಾ ಕಿಣಿ, ರಂಗ ಕಲಾವಿದೆ ಪ್ರಪುಲ್ಲಾ ಹೆಗಡೆ, ಖ್ಯಾತ ಸಾಹಿತಿ ಗೀತಾ ಕಿಣಿ, `ಉಜ್ವಾಡು' ಸಿನೇಮಾ ಕಲಾವಿದರಾದ ಶಶಿ ಭೂಷಣ ಕಿಣಿ, ರಂಗಕರ್ಮಿ ಪ್ರಕಾಶ್ ನಾಯಕ್, ಉಳ್ಳಾಲ ರಾಘವೇಂದ್ರ ಕಿಣಿ ಸೇರಿದಂತೆ ನೂರಾರು ಕೊಂಕಣಿ ಭಾಷಿಗರು ಉಪಸ್ಥಿತರಿದ್ದರು.
ಕಾಸರಗೋಡಿನ ಡಾ.ಮೈತ್ರಿ ರಾವ್ ಹಾಗು ವಿನಯ ರಾವ್ ಪ್ರಾರ್ಥನೆ ಹಾಡಿದರು. ಸಂಚಾಲಕ ಪ್ರವೀಣ್ ಕಾಮತ್ ವಂದಿಸಿದರು. ಕೊಂಕಣಿ ಸಾಂಸ್ಕøತಿಕ ಸಂಘ ಮಂಗಳೂರು ಇದರ ಅಧ್ಯಕ್ಷರಾಗಿ ಕೊಂಕಣಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ಎಂ.ವಿಠಲ ಕುಡುವಾ ಅವರನ್ನು ರಂಗಚಿನ್ನಾರಿ ಹಾಗು ಕಾಸರಗೋಡು ಜಿಎಸ್‍ಬಿ ಮಹಿಳಾ ಸಂಘದ ಪರವಾಗಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು.