ಮಂಜೇಶ್ವರ: ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಮಂಜೇಶ್ವರ ಹಾಗೂ ಸಾಹಿತ್ಯ ಕೂಟ ಕುಂಜತ್ತೂರು ಇದರ ಸಹಬಾಗಿತ್ವದಲ್ಲಿ ಪಾರ್ತಿಸುಬ್ಬ ವೇದಿಕೆ ಗಿಳಿವಿಂಡು ಆವರಣದಲ್ಲಿ ಕಾರ್ಯಕ್ರಮ ವೈವಿಧ್ಯ ಇತ್ತೀಚೆಗೆ ನಡೆಯಿತು.
ಸಾಹಿತ್ಯ ಕೂಟದ ಸದಸ್ಯರ ಪ್ರಾರ್ಥನೆಯ ಬಳಿಕ ನಿವೃತ್ತ ಜಿಲ್ಲಾ ತಹಶೀಲ್ದಾರರಾದ ಕೆ.ಪಿ.ಸೋಮಶೇಖರ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಗಿಳಿವಿಂಡಿನ ಆಡಳಿತಾಧಿಕಾರಿ ಡಾ.ಕಮಲಾಕ್ಷ ಕೆ., ಕುಂಜತ್ತೂರು ಸಾಹಿತ್ಯ ಕೂಟದ ಅಧ್ಯಕ್ಷ ಬಿ.ನಾರಾಯಣ, ನಾರಾಯಣ ಮಾಸ್ತರ್, ಬಿ.ಸೋಮನಾಥ ಮೊದಲಾದವರು ಉಪಸ್ಥಿತರಿದ್ದರು.
ಕೃಷ್ಣಪ್ಪ ಪೂಜಾರಿ ಅವರಿಂದ ಗೋಲ್ಗಥಾ ಖಂಡಕಾವ್ಯ ವಾಚನ ಮತ್ತು ವಿವರಣೆ ಕಾರ್ಯಕ್ರಮದಲ್ಲಿ ವಿಶೇಷ ಮೆರುಗನ್ನು ಪಡೆಯಿತು. ಬಳಿಕ ಸಾಹಿತ್ಯ ಕೂಟದ ಸದಸ್ಯರಿಂದ ಭಾವಗಾನ, ಜನಪದ ಗೀತೆಗಳು, ನೃತ್ಯಾಭಿನಯ, ಸ್ವರಚಿತ ಕವನ ಪ್ರಸ್ತುತಿ ಸಹಿತ ಹಲವು ಮನರಂಜನಾ ಕಾರ್ಯಕ್ರಮಗಳು ನಡೆಯಿತು.