ಮುಳ್ಳೇರಿಯ: ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲಯಗಲಲ್ಲಿ ಒಂದಾಗಿದ್ದು, ವಿಶಾಲ ಕ್ಷೇತ್ರವೆಂದೇ ಪ್ರಸಿದ್ದವಾದ ಅಡೂರು ಶ್ರೀಮಹಾಲಿಂಗೇಶ್ವರ ವಿನಾಯಕ ಕ್ಷೇತ್ರದಲ್ಲಿ ಮಕರ ಸಂಕ್ರಮಣದ ಅಂಗವಾಗಿ ಸೋಮವಾರ ವಿವಿಧ ವಿಧಿವಿಧಾನಗಳು ಸಾಂಪ್ರದಾಯಿಕ ಶ್ರದ್ದಾ ಭಕ್ತಿಯಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ತಂತ್ರಿವರ್ಯ ಕುಂಟಾರು ವಾಸುದೇವ ತಂತ್ರಿವರ್ಯರ ನೇತೃತ್ವದಲ್ಲಿ ಸಾವಿರ ಕೊಡ ಉತ್ಸವ, ಮಹಾ ಬಲಿ ಉತ್ಸವ, ಮಹಾಪೂಜೆಗಳು ನೆರವೇರಿತು. ಪಾರಂಪರಿಕ ಮನೆಯವರು, ಊರ-ಪರವೂರ ಸಾವಿರಾರು ಭಕ್ತರು ಭಾಗವಹಿಸಿದ್ದರು.