ಬೀಜಿಂಗ್: ಚೀನಾ ಹೊಸದಾಗಿ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಕಡಲ ರೇಡಾರ್ ಭಾರತದಷ್ಟು ವಿಶಾಲ ಪ್ರದೇಶದ ಮೇಲೆ ನಿಗಾವಹಿಸುವ ಸಾಮಥ್ರ್ಯ ಹೊಂದಿದೆ ಎಂದು ಬುಧವಾರ ಮಾಧ್ಯಮಗಳು ವರದಿ ಮಾಡಿವೆ.
ಚೀನಾ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಈ ಹೊಸ ರೇಡಾರ್ ವ್ಯವಸ್ಥೆಯನ್ನು ಅಲ್ಲಿನ ನೌಕಾಪಡೆ ಸಂಪೂರ್ಣ ಮೇಲ್ವಿಚಾರಣೆ ನಡೆಸಲಿದೆ. ಸದ್ಯ ಅಸ್ತಿತ್ವದಲ್ಲಿರುವ ತಂತ್ರಜ್ಞಾನಕ್ಕಿಂತ ಅತಿ ವೇಗದಲ್ಲಿ ಶತ್ರುಗಳ ಹಡಗು, ವಿಮಾನ ಮತ್ತು ಕ್ಷಿಪಣಿಗಳಿಂದ ಎದುರಾಗುವ ಅಪಾಯಗಳನ್ನು ಪತ್ತೆ ಹಚ್ಚಲು ಇದು ನೆರವಾಗಲಿದೆ.
ಈ ರೇಡಾರ್ ಚೀನಾದ ಸಂಪೂರ್ಣ ಸಮುದ್ರ ಪ್ರದೇಶಗಳ ಮೇಲೆ ನಿಗಾವಹಿಸಲಿದೆ ಎಂದು ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಚೀನಾ ವಿಜ್ಞಾನ ಅಕಾಡೆಮಿ(ಸಿಎಎಸ್) ಮತ್ತು ಚೀನಾ ಎಂಜಿನಿಯರಿಂಗ್ ಅಕಾಡೆಮಿ(ಸಿಎಇ) ಈ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದು, ಈ ಸಾಧನೆಗಾಗಿ ಸಿಎಎಸ್ ನ ಶಿಕ್ಷಣ ತಕ್ಷ ಲಿಯು ಯಂಗ್ಟನ್ ಮತ್ತು ಸೇನೆಯ ವಿಜ್ಞಾನಿ ಕಿಯಾನ್ ಕಿಹು ಅವರಿಗೆ 1.116 ಡಾಲರ್(786.75 ಕೋಟಿ ರು.) ಮೊತ್ತದ ದೇಶದ ಅತ್ಯುತ್ತಮ ವಿಜ್ಞಾನ ಪ್ರಶಸ್ತಿಯನ್ನು ನೀಡಲಾಗಿದೆ.