ಕುಂಬಳೆ: ವ್ಯಾಪಕವಾಗಿ ಅಯ್ಯಪ್ಪ ಭಕ್ತರನ್ನು, ಹಿಂದೂ ಮುಖಂಡರನ್ನು ಗುರಿಯಾಗಿಸಿ ಮಾರಣಾಂತಿಕ ಹಲ್ಲೆ, ಅಕ್ರಮ ನಡೆಸಿರುವುದು, ಮನೆಗಳಿಗೆ ಹನಿ ಮಾಡಿರುವುದು ಎಡರಂಗ ಹಾಗೂ ಮುಸ್ಲಿಂ ಮತೀಯ ಸಂಘಟನೆಗಳ ಪೂರ್ವನಿಯೋಜಿತ ಕೃತ್ಯ, ಇದರ ಹಿಂದೆ ಎಡರಂಗ ನೇತಾರರ ಷಡ್ಯಂತ್ರವಿದೆ. ಕೋಮು ಗಲಭೆ ನಡೆಸಿ ಪ್ರಳಯ ಹಾಗೂ ಶಬರಿಮಲೆ ವಿಚಾರದಿಂದ ಜನತೆಯ ಗಮನ ಬೇರೆಡೆ ಮಾಡುವುದು ಎಡರಂಗದ ಉದ್ದೇಶ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಮಾಧ್ಯಮ ಹೇಳಿಕೆಯಲ್ಲಿ ಆರೋಪಿಸಿದೆ.
ಅಯ್ಯಪ್ಪ ಭಕ್ತರ ಮೇಲಿನ ದಾಳಿ ಖಂಡನೀಯ, ಹಿಂದುಗಳ ಕ್ಷಮೆಗೂ ಮಿತಿ ಇದೆ. ಅದನ್ನು ಪರೀಕ್ಷಿಸಬೇಡಿ ಎಂದು ಬಿಜೆಪಿ ಮುನ್ನೆಚ್ಚರಿಕೆ ನೀಡಿದೆ.
ಕುಂಜತೂರಲ್ಲಿ ಹಲ್ಲೆಗೊಳಗಾದ ಅಯ್ಯಪ್ಪ ಸ್ವಾಮಿ ವ್ರತಧಾರಿಗಳನ್ನು, ಹಾಗೂ ಕಡಂಬಾರಲ್ಲಿ ಚೂರಿ ಇರಿತದಿಂದ ಗಾಯಗೊಂಡ ಬಿಜೆಪಿ ಕಾರ್ಯಕರ್ತರನ್ನು ಬಿಜೆಪಿ ನೇತಾರರು ವಿವಿಧ ಅಸ್ಪತ್ರೆಗಲ್ಲಿ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.
ಪೊಲೀಸ್ ಇಲಾಖೆ ಕಮ್ಯುನಿಸ್ಟರ ಆಜ್ಞೆಯಂತೆ ಕಾರ್ಯನಿರ್ವಹಿಸುತ್ತಿದೆ. ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸದೆ ಪೊಲೀಸ್ ಇಲಾಖೆ ಓಲೈಕ್ಕೆ ಮಾಡುತ್ತಿದೆ. ಹರತಾಳದ ನೆಪದಲ್ಲಿ ಹಿಂದೂಗಳ ಮೇಲೆ ಮಾತ್ರ ದೂರು ದಾಖಲಿಸುವಂತೆ ನೋಡಿಕೊಳ್ಳುವ ಸರಕಾರ ಅಯ್ಯಪ್ಪ ಭಕ್ತರ ಮೇಲೆ ದಾಳಿ ಮಾಡಿರುವ ಮತೀಯ ಮುಸ್ಲಿಂ ಸಂಘಟನೆಗಳನ್ನು ಸಂರಕ್ಷಿಸುತ್ತಿದೆ ಎದು ಆರೋಪಿಸಿದೆ. ಕುಂಜತೂರು ,ಮಂಜೇಶ್ವರ ಕಡಪ್ಪರ ಕೇಂದ್ರೀಕರಿಸಿ ನಿರಂತರ ದುಷ್ಕø್ರತ್ಯ ನಡೆಸುವ ತಂಡಗಳ ಮಾಹಿತಿ ಇದ್ದರೂ ಪೊಲೀಸ್ ಇಲಾಖೆ ಸರಕಾರದ ಒತ್ತಡದಿಂದ ಆರೋಪಿಗಳನ್ನು ಬಂದಿಸುತ್ತಿಲ್ಲ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.