ಕಾಸರಗೋಡು: ಲೋಕಸಭಾ ಚುನಾವಣೆ ಸಿದ್ಧತೆ ಸಂಬಂಧ ತುರ್ತಾಗಿ ನಡೆಸಬೇಕಾದ ವ್ಯವಸ್ಥೆಗಳ ಕುರಿತಾಗಿ ಸಭೆ ಜರಗಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಚೇಂಬರ್‍ನಲ್ಲಿ ನಡೆದ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು.
ಜ.22ರಿಂದ ಕಾಲ್ ಸೆಂಟರ್ ಚಟುವಟಿಕೆ ಆರಂಭ : ಚುನಾವಣೆ ಸಂಬಂಧ ಸಾರ್ವಜನಿಕರ ಸಂಶಯ ದೂರಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಜ.22ರಿಂದ ಕಾಲ್ ಸೆಂಟರ್ ಚಟುವಟಿಕೆ ಆರಂಭಿಸಲಿದೆ. ಚುನಾವಣೆ ಆಯೋಗದ ಆದೇಶ ಪ್ರಕಾರ ಈ ಕಾಲ್ ಸೆಂಟರ್ ಆರಂಭಿಸಲಾಗುವುದು. ಜ.22ರ ನಂತರ 1950 ಎಂಬ ನಂಬ್ರಕ್ಕೆ ಕರೆಮಾಡುವ ಮೂಲಕ ಸಾರ್ವಜನಿಕರು ಚುನಾವಣೆ, ಮತದಾತರ ಪಟ್ಟಿ, ಗುರುತು ಚೀಟಿ, ಮತಗಟ್ಟೆ ಇತ್ಯಾದಿ ವಿಚಾರಗಳ ಮಾಹಿತಿ ಪಡೆಯಬಹುದು. ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆ ವರೆಗೆ ಈ ಸೆಂಟರ್ ಚಟುವಟಿಕೆ ನಡೆಸಲಿದೆ.
ಕಾಲ್ ಸೆಂಟರ್ ಮೂಲಕ ಸಂಶಯ ನಿವಾರಣೆ, ದೂರುಗಳಿದ್ದಲ್ಲಿ ದಾಖಲಿಸುವ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ„ಕಾರಿ ತಿಳಿಸಿದರು. ಇದಕ್ಕಾಗಿ ಪ್ರತ್ಯೇಕ ಕಚೇರಿಯೂ ಸಜ್ಜುಗೊಂಡಿದೆ. ಹುಸೂರ್ ಶಿರಸ್ತೇದಾರ್ ಕೆ.ನಾರಾಯಣನ್ ಅವರನ್ನು ಜಿಲ್ಲಾ ಸಂಪರ್ಕ ಅ„ಕಾರಿಯಾಗಿ ನೇಮಿಸಲಾಗಿದೆ. ಕಾಲ್ ಸೆಂಟರ್ ನಲ್ಲಿ ಶಾಶ್ವತವಾಗಿ 4 ಮಂದಿ ಸಿಬ್ಬಂದಿ ಇರುವರು. ಮತದಾತರ ಹೆಲ್ಪ್ ಲೈನ್ ಎಂಬ ಮೊಬೈಲ್ ಆ್ಯಪ್ ಚುನಾವಣೆ ಅಗತ್ಯಕ್ಕಾಗಿ ಇರಿಸಲಾಗಿದೆ ಎಂದವರು ಹೇಳಿದರು.
ಸಭೆಯಲ್ಲಿ ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಚುನಾವಣೆ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್, ಜ್ಯೂನಿಯರ್ ವರಿಷ್ಠಾಧಿಕಾರಿ ಎಸ್.ಗೋವಿಂದನ್, ಕಂಟ್ರೋಲ್ ಸಂಯೋಜಕ ಶ್ರೀಜಾ, ಸೀನಿಯರ್ ಕ್ಲರ್ಕ್ ಟಿ.ಕೆ.ವಿನೋದ್, ಖಾಸಗಿ ಮೊಬೈಲ್ ಕಂಪನಿ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.