ಮುಳ್ಳೇರಿಯ: ಚೊಟ್ಟೆ ಕುಂಡಂಗುಳಿ ಶ್ರೀ ದುರ್ಗಾದೇವಿ ದೇವರ ಮನೆಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ನುರಿತ
ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮೆ ನಡೆಯಿತು.
ಹಿಮ್ಮೇದಲ್ಲಿ ಭಾಗವತರಾಗಿ ಮನೋಹರ ಬಲ್ಲಾಳ್ ಅಡ್ವಳ, ಅಮೃತಾ ಅಡಿಗ ಪಾಣಾಜೆ, ಚೆಂಡೆ ವಾದನದಲ್ಲಿ ಪುಂಡಿಕೈ ರಾಜೇಂದ್ರ ಪ್ರಸಾದ್, ಶ್ರೀಧರ ಎಡಮಲೆ, ಮದ್ದಳೆ ವಾದನದಲ್ಲಿ ಸತ್ಯನಾರಾಯಣ ಅಡಿಗ ಪಾಣಾಜೆ, ಚಕ್ರತಾಳದಲ್ಲಿ ಲೋಕೇಶ್ ಮಲ್ಲ ಸಹಕರಿಸಿದರು.
ಪಾತ್ರಧಾರಿಗಳಲ್ಲಿ ವಿಷ್ಣುವಾಗಿ ನೆಟ್ಟಣಿಗೆ ಮಾಧವ, ಬ್ರಹ್ಮನಾಗಿ ವರ್ಷ ಬದಿಯಡ್ಕ, ಈಶ್ವರ ಸುಪ್ರೀತ ರೈ ಮುಳ್ಳೇರಿಯ, ಮಧು ರಾಧಾಕೃಷ್ಣ ನಾವಡ ಮಧೂರು, ಕೈಟಭ ನಾರಾಯಣ ಮಣಿಯಾಣಿ ಮೂಲಡ್ಕ, ಮಾಲಿನಿಯಾಗಿ ಮುಕುಂದ ರಾವ್ ಮಲ್ಲ, ವಿದ್ಯುನ್ಮಾಲಿ ಬಾಲಕೃಷ್ಣ ಗೌಡ ದೇಲಂಪಾಡಿ, ಸುಪಾಶ್ರ್ವಕ ಧನಿಶ್ ಕುಂಡಂಗುಳಿ, ಮಹಿಷಾಸುರ ಜಯರಾಮ ಪಾಟಾಳಿ ಪಡುಮಲೆ, ಯಕ್ಷನಾಗಿ ಕಿಶನ್ ಅಗ್ಗಿತ್ತಾಯ, ದೇವೇಂದ್ರನಾಗಿ ಕಮಲಾಕ್ಷ ಆದೂರು, ದೇವೇಂದ್ರಬಲ ಶ್ರೀನಿಧಿ ಅನಂತಪುರ, ಕಿಶನ್ ಅಗ್ಗಿತ್ತಾಯ, ಸುಪ್ರೀತ ರೈ ಮುಳ್ಳೇರಿಯ, ಶಂಕಾಸುರನಾಗಿ ಸುರೇಂದ್ರ, ದುರ್ಗಾಸುರನಾಗಿ ಧನಿಶ್ ಕುಂಡಂಗುಳಿ , ಬಿಡಲಾಸುರ ಮತ್ತು ಸಿಂಹವಾಗಿ ಗೋಪಾಲಕೃಷ್ಣ ಕುಂಪಳ, ಹಾಸ್ಯಗಾರನಾಗಿ ಚನಿಯಪ್ಪ ನಾಯ್ಕ ಸುಳ್ಯಪದವು ಭಾಗವಹಿಸಿದ್ದರು.
ಉತ್ತಮ ರೀತಿಯಲ್ಲಿ ಮೂಡಿಬಂದ ಯಕ್ಷಗಾನವು ತುಂಬಿದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.