ಕಾಸರಗೋಡು: 25 ದಿನಗಳ ಅವಧಿಯ ತೆಂಗಿನ ಕೃಷಿಯಲ್ಲಿ ನಿಪುಣತೆ ಅಭಿವೃದ್ಧಿ ತರಬೇತಿ ಕಾಸರಗೋಡು ಸಿ.ಪಿ.ಸಿ.ಆರ್.ಐ.ಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ.
`ತೆಂಗಿನ ಕೃಷಿಯಲ್ಲಿ ಸಮಗ್ರ ಕೃಷಿ ರೀತಿಗಳು ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳ ತಯಾರಿ' ಎಂಬ ವಿಷಯದಲ್ಲಿ ಜನವರಿ-ಫೆಬ್ರವರಿ ತಿಂಗಳಲ್ಲಿ ತರಬೇತಿ ನಡೆಯಲಿದೆ. ತೆಂಗಿನ ವೈಜ್ಞಾನಿಕ ಕೃಷಿ ವಿಧಾನಗಳು, ಬೆಳೆ ಸಂರಕ್ಷಣೆ, ಬೆಳೆ ತರಬೇತಿ, ತೆಂಗಿನಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳ ತಯಾರಿ, ನೀರಾ ತಯಾರಿ ಇತ್ಯಾದಿ ವಿಚಾರಗಳಲ್ಲಿ ಪರಿಣತರು ತರಬೇತಿ ನೀಡಲಿದ್ದಾರೆ. ಆಸಕ್ತರಿಗಾಗಿ ದೂರವಾಣಿ ಸಂಖ್ಯೆ: 04994-232993, 9496296986 ಸಂಪರ್ಕಿಸಬಹುದು.
ತೆಂಗಿನ ಮರವೇರುವ ತರಬೇತಿ:
ಸಿ.ಪಿ.ಸಿ.ಆರ್.ಐ.ಯ ಕೃಷಿ ವಿಜ್ಞಾನ ಕೇಂದ್ರದಲ್ಲಿ 25 ದಿನಗಳ ಅವಧಿಯ ತೆಂಗಿನ ಮರವೇರಿ ಕಾಯಿ ಕೊಯ್ಯುವ ಬಗ್ಗೆ ತರಬೇತಿ ನೀಡಲಾಗುವುದು. 5ನೇ ತರಗತಿ ಕಲಿತ, 18ರಿಂದ 45 ವರ್ಷ ಪ್ರಾಯದ ಯುವಕ-ಯುವತಿಯರು ತರಬೇತಿಯಲ್ಲಿ ಭಾಗವಹಿಸಬಹುದು. ಆಸಕ್ತರು ಜ.14ರಂದು ಬೆಳಗ್ಗೆ 10.30ಕ್ಕೆ ಕಾಸರಗೋಡು ಚೌಕಿಯಲ್ಲಿರುವ ವಿಜ್ಞಾನ ಕೇಂದ್ರದಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು. ಆಯ್ದ 20 ಮಂದಿಗೆ ತರಬೇತಿಯೊಂದಿಗೆ ಈ ಅವಧಿಯಲ್ಲಿ ವಸತಿ, ಊಟ ಉಚಿತವಾಗಿ ಲಭಿಸಲಿದೆ. ತರಬೇತಿ ಪಡೆದವರಿಗೆ ಅಗ್ರಿಕಲ್ಚರಲ್ ಸ್ಕಿಲ್ ಕೌನ್ಸಿಲ್ ಆಫ್ ಇಂಡಿಯಾ ನೀಡುವ ಅರ್ಹತಾಪತ್ರ ನೀಡಲಾಗುವುದು. ಮಾಹಿತಿಗೆ ದೂರವಾಣಿ ಸಂಖ್ಯೆ: 04994-232993, 9591029963 ಸಂಪರ್ಕಿಸಬಹುದು.