ಬದಿಯಡ್ಕ: ನೀರ್ಚಾಲಿನ ಮುಂಚೂಣಿಯ ಸೇವಾ ಸಂಸ್ಥೆಯಾದ ನಿವೇದಿತಾ ಸೇವಾ ಮಿಷನ್ ನೇತೃತ್ವದಲ್ಲಿ ನಡೆಸಲಾದ `ಬೇಬಿ ಸಾನಿಧ್ಯ ಉಳಿಸಿ' ಧನಸಹಾಯ ಅಭಿಯಾನದಲ್ಲಿ ಸಂಗ್ರಹಿಸಿ ನೀಡಲಾದ ರೂ 40,000 ಕ್ಕೂ ಮಿಕ್ಕಿದ ಮೊತ್ತದ ಕೊನೆಯ ಕಂತು ರೂ 14 ಸಾವಿರದ ಚೆಕ್ಕನ್ನು ಸಾನಿಧ್ಯಾಳ ಪೆÇೀಷಕರಿಗೆ ಶನಿವಾರ ಹಸ್ತಾಂತರಿಸಲಾಯಿತು.
ಈ ಮಹತ್ಕಾರ್ಯದಲ್ಲಿ ನಿವೇದಿತಾ ಸೇವಾ ಮಿಶನ್‍ನೊಂದಿಗೆ ಕೈಜೋಡಿಸಿದ ಎಲ್ಲ ಸಹೃದಯ ದಾನಿಗಳಿಗೆ ಈ ಸಂದರ್ಭದಲ್ಲಿ ಕೃತಜ್ಞತೆಯನ್ನು ಸಲ್ಲಿಸಲಾಯಿತು. ನಿವೇದಿತಾ ಸೇವಾಮಿಶನ್‍ನ ಹರಿಪ್ರಸಾದ ಪೆರ್ವ, ಬಾಲಸುಬ್ರಹ್ಮಣ್ಯ ಮಲ್ಲಡ್ಲ, ಗಣೇಶ್ ಕೃಷ್ಣ ಭಟ್ ಅಳಕ್ಕೆ ಚೆಕ್ ಹಸ್ತಾಂತರಿಸಿದರು.