ಕಾಸರಗೋಡು: ಉಚಿತವಾಗಿ ಯೋಗ ತರಗತಿಗಳನ್ನು ವಹಿಸಿಕೊಂಡು ನಡೆಸಲು ಸಿದ್ಧರಾದ ಸಂಘಟನೆಗಳಿಂದ ಅರ್ಜಿ ಕೋರಲಾಗಿದೆ.
ರಾಷ್ಟ್ರೀಯ ಆಯುಷ್ ಮಿಷನ್, ಭಾರತೀಯ ಚಿಕಿತ್ಸಾ ಇಲಾಖೆ ಜಂಟಿ ವತಿಯಿಂದ ಪಳ್ಳಿಕ್ಕರೆ, ಉದುಮ ಗ್ರಾಮ ಪಂಚಾಯತ್‍ಗಳಲ್ಲಿ ಜಾರಿಮಾಡುವ ಆಯುಷ್ ಗ್ರಾಮ ಯೋಜನೆ ಅಂಗವಾಗಿ ಈ ತರಗತಿಗಳು ನಡೆಯಲಿವೆ.
ಸಾಂಸ್ಕøತಿಕ-ಸ್ವಯಂಸೇವಾ ಸಂಘಟನೆಗಳು, ಕುಟುಂಬಶ್ರೀ, ನೆರೆಕೂಟಗಳು, ರೆಸಿಡೆನ್ಸ್ ಅಸೋಸಿಯೇಶನ್ ಇತ್ಯಾದಿಗಳಿಂದ ಅರ್ಜಿ ಕೋರಲಾಗಿದೆ. ಆಯುಷ್ ಗ್ರಾಮ ಯೋಜನೆಯ ತರಬೇತಿ ಪಡೆದ ಯೋಗ ಶಿಕ್ಷಕಿಯ ಮೂಲಕ 15-20 ದಿನಗಳ ತರಗತಿ ನಡೆಯಲಿದೆ. ಕನಿಷ್ಠ 25 ಮಂದಿ ತರಗತಿಗೆ ಹಾಜರಾಗಬೇಕು. ಮಾಹಿತಿಗೆ ಉದುಮ ಮುಲ್ಲಚ್ಚೇರಿಯಲ್ಲಿರುವ ಸರಕಾರಿ ಆಯುರ್ವೇದ ಡಿಸ್ಪೆನ್ಸರಿ ಯಾ ದೂರವಾಣಿ ಸಂಖ್ಯೆ 9497875085 ನ್ನು ಸಂಪರ್ಕಿಸಬಹುದು.