ಮಂಜೇಶ್ವರ: ಕಡಂಬಾರು ವಲಿಯುಲ್ಲಾಯಿ ಹಾಜಿಯಾರ್ ಉಪ್ಪಾಪ ಮಖಾಂ ಉರೂಸ್ ಪ್ರಯುಕ್ತ ಶುಕ್ರವಾರ ಸಂಜೆ ಧಾರ್ಮಿಕ ಸೌಹಾರ್ಧ ಸಮ್ಮೇಳನ ನಡೆಯಿತು.
ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್ ಪಿ ಬರ್ವರ ಅಧ್ಯಕ್ಷತೆಯಲ್ಲಿ ಜರಗಿದ ಧಾರ್ಮಿಕ ಸೌಹಾರ್ಧ ಸಮ್ಮೇಳನವನ್ನು ಅಂತರಾಷ್ಟ್ರೀಯ ಧಾರ್ಮಿಕ ಪಂಡಿತ ಸಿಂಸಾರುಲ್ ಹಕ್ ಹುದವಿ ಉದ್ಘಾಟಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಉರೂಸ್ ಸಮಿತಿ ಕಾರ್ಯದರ್ಶಿ ತಾಜುದ್ದೀನ್, ಸೂರ್ಯನಾರಾಯಣ ಅಯ್ಯರ್, ಎಂ ಪಿ ಮೊಹಮ್ಮದ್ ಸಹದಿ, ಮಸೀದಿ ಖತೀಬರಾದ ಮಹ್ ಶೂಕ್, ಪಿ ಎಚ್ ಅಬ್ದುಲ್ ಹಮೀದ್, ಎ ಕೆ ಎಂ ಅಶ್ರಫ್, ಕಡಂಬಾರ್ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹೊಸಮನೆ, ಹರ್ಷಾದ್ ವರ್ಕಾಡಿ, ವಿಷ್ಣು ಮೂರ್ತಿ ಅಯ್ಯರ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ಬಳಿಕ ಬರ್ಧಾ ಮಜ್ಲಿಸ್ ನಡೆಯಿತು.