ಕುಂಬಳೆ: ಸೀತಾಂಗೋಳಿ ಸಮೀಪದ ಮುಗು ಗ್ರಾಮದ ಶ್ರೀ ಸುಬ್ರಾಯದೇವ ದೇವಸ್ಥಾನದಲ್ಲಿ ಕಿರುಷಷ್ಠೀ ಮಹೋತ್ಸವವು ಜ.11 ಹಾಗೂ ಜ.12ರಂದು ಜರಗಲಿದೆ.
ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಕಾರ್ಯಕ್ರಮವು ನೆರವೇರಲಿದೆ. ಜ.11ರಂದು ಸಂಜೆ 4 ಗಂಟೆಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, 6ಕ್ಕೆ ವಿಷ್ಣುನಗರ ಮುಂಡಿತ್ತಡ್ಕ ಶ್ರೀ ಮಹಾವಿಷ್ಣು ಯಕ್ಷಗಾನ ಕಲಾಸಂಘದಿಂದ `ಸುದರ್ಶನ ವಿಜಯ' ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಊರ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಜ.12ರ ಬೆಳಿಗ್ಗೆ 6.30ರಿಂದ ವಿವಿಧ ಪೂಜಾ ವಿಧಿವಿಧಾನಗಳು ನಡೆಯಲಿದ್ದು, 11.30ಕ್ಕೆ ಸಭಾ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನೆರವೇರಲಿದೆ. ಸಂಜೆ 6.30ಕ್ಕೆ ದೀಪಾರಾಧನೆ, 9ಕ್ಕೆ ರಂಗಪೂಜೆ, 10 ಗಂಟೆಗೆ ಶ್ರೀ ದೇವರ ಬಲಿ ಉತ್ಸವ ಜರಗಲಿದೆ. ಸಂಜೆ 6 ಗಂಟೆಯಿಂದ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾ ಇವರಿಂದ ಕನಕಾಂಗಿ ಕಲ್ಯಾಣ - ರಕ್ತರಾತ್ರಿ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.