ಮಂಜೇಶ್ವರ: ಇತಿಹಾಸ ಪ್ರಸಿದ್ದ ಮಂಗಲ್ಪಾಡಿ ಖಾಝಿ ಕುಂಞÂಆಹ್ಮದ್ ಮುಸ್ಲಿಯಾರ್ ಉಪ್ಪಾಪ ಮಖಾಂ ಉರೂಸ್ ಹಾಗೂ ಧಾರ್ಮಿಕ ಪ್ರವಚನಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಭಾನುರ ಸಂಜೆ ಮಖಾಂ ಝಿಯಾರತಿನೊಂದಿಗೆ ಧಾರ್ಮಿಕ ಪ್ರವಚನ ಚಾಲನೆಗೊಂಡಿತು. ಮುಟ್ಟಂ ಕುಂಞÂಕೋಯ ತಂಙಳ್ ಝಿಯಾರತಿಗೆ ನೇತೃತ್ವ ನೀಡಿದರು. ಲಂಡನ್ ಮೊಹಮ್ಮದ್ ಹಾಜಿ ಧ್ವಜಾರೋಹಣ ಗೈದರು.
ಬಳಿಕ ಅಬ್ದುಲ್ಲ ಕುಂಞÂ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆದ ಮತ ಸೌಹಾರ್ಧ ಸಮ್ಮೇಳನವನ್ನು ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು ಉದ್ಘಾಟಿಸಿದರು. ಈ ಸಂದರ್ಭ ಶ್ರೀ ಚೇರುಂಬ ಭಗವತೀ ಕ್ಷೇತ್ರದ ಅಧ್ಯಕ್ಷ ರಾಮಚಂದ್ರನ್ ಸಿ., ಮುಸ್ಲಿಂ ಯೂತ್ ಲೀಗ್ ರಾಜ್ಯ ಕಾರ್ಯದರ್ಶಿ ಎ ಕೆ ಎಂ ಅಶ್ರಫ್, ಶಾಹುಲ್ ಹಮೀದ್ ಬಂದ್ಯೋಡ್, ಕೊರಗಪ್ಪ ಶೆಟ್ಟಿ, ಟಿ ಎ ಮೂಸ, ಕರಾವಳಿ ಪೋಲೀಸ್ ಠಾಣಾ ಅಧಿಕಾರಿ ಸುರೇಶ್ ಬಾಬು ಮೊದಲಾದವರು ಮಾತನಾಡಿದರು. ವೇದಿಕೆಯಲ್ಲಿ ಬಹ್ರೈನ್ ಮೊಹಮ್ಮದ್, ಗೋಲ್ಡನ್ ರಹ್ಮಾನ್ ಸಹಿತ ಗಣ್ಯರು ಉಪಸ್ಥಿತರಿದ್ದರು.
ರಾತ್ರಿ 8 ಗಂಟೆಗೆ ನಡೆದ ಧಾರ್ಮಿಕ ಭಾಷಣದಲ್ಲಿ ಶಮೀರ್ ಮನ್ನಾನಿ ಮುಖ್ಯ ಭಾಷಣ ನಡೆಸಿದರು. ಮುಂದಿನ ದಿನಗಳಲ್ಲಿ ನಡೆಯಲಿರುವ ಧಾರ್ಮಿಕ ಭಾಷಣದಲ್ಲಿ ವಹಾಬ್ ನೌಮಿ ಕೊಲ್ಲಂ, ಖಲೀಲ್ ಹುದವಿ, ಎ ಎಂ ನೌಶಾದ್ ಬಾಖವಿ, ನೌಫಲ್ ಬಾಖವಿ ಮೊದಲಾದ ಪಂಡಿತ ಶಿರೋಮಣಿಗಳು ಭಾಷಣ ಗೈಯಲಿದ್ದಾರೆ. ಅಬ್ದುಲ್ ಹಮೀದ್ ತೋಟ ಸ್ವಾಗತಿಸಿ, ಖತಿಬ್ ಅಯ್ಯೂಬ್ ಇಂದಾದಿ ವಂದಿಸಿದರು. ಉದ್ಘಾಟನಾ ಸಮಾರಂಭದಲ್ಲಿ ನೂರಾರು ಮಂದಿ ಪಾಲ್ಗೊಂಡರು.