ಕುಂಬಳೆ: ಕಾಸರಗೋಡು ಜಿಲ್ಲೆಯ ಕುಂಬಳೆಗೆ ಸನಿಹದ ಎಡನಾಡು ಗ್ರಾಮದ ಶಡ್ರಂಪಾಡಿ ಶ್ರೀಗೋಪಾಲಕೃಷ್ಣ ದೇವಸ್ಥಾನದ ನವೀಕರಣ ಪುನಃಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಏ.02 ರಿಂದ 10 ರ ತನಕ ಜರಗಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸೋಮವಾರ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ನಿಡ್ಲೆ ಗೋವಿಂದ ಭಟ್, ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಎಚ್.ಶಂಕರನಾರಾಯಣ ಭಟ್ ಹೊಸಮನೆ, ಮಹಾಬಲೇಶ್ವರ ಭಟ್ ಆರೋಳಿ, ನಾರಾಯಣ ಚೆಟ್ಟಿಯಾರ್, ಗೋಪಾಲಕೃಷ್ಣ ಭಟ್ ಚೆನ್ನಂಪಾಡಿ, ನಾರಾಯಣ ಗಟ್ಟಿ ಕಾಪಿಕಾಡು, ಎಚ್. ಸೂರ್ಯನಾರಾಯಣ ಹೊಸಮನೆ, ಗೋಕುಲದಾಸ್, ವಿಠಲ ನಡುಮನೆ, ನಂದನ ಆರೋಳಿ, ಹರೀಶ್ ಹಳೆಮನೆ ಉಪಸ್ಥಿತರಿದ್ದರು.