ಉಪ್ಪಳ: ವಿಶ್ವಜಿತ್ ಅತಿರಾತ್ರ ಸೋಮಯಾಗ" ಕ್ಕೆ "ಕಟ್ಟಿಗೆ ಮುಹೂರ್ತ"ವು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ ಚೆಂಡೆ ಜಾಗಟೆಗಳೊಡನೆ ಸಂಭ್ರಮದಿಂದ ಭಾನುವಾರ ನಡೆಯಿತು. ಬಳಿಕ ನಡೆದ "ಕಾರ್ಯಕರ್ತರ ಸಭೆ"ಯಲ್ಲಿ ಮಾಣಿಲ ಶ್ರೀಗಳು ದೀಪಪ್ರಜ್ವಲನೆಗೈದು 'ಯಾಗದ ಆಮಂತ್ರಣ ಪತ್ರಿಕೆ'ಯನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಶ್ರೀಗಳವರು ಆಶೀರ್ವಚನಗೈದು " ಈ ಯಾಗಜ್ವಾಲೆಯಲ್ಲಿ ನಮ್ಮೆಲ್ಲಾ ದುಷ್ಕರ್ಮಗಳು ಉರಿದು, ಸಾಮರಸ್ಯದೊಂದಿಗೆ ನಮ್ಮ ಬದುಕಿನ ಧೀ:ಶಕ್ತಿಯನ್ನು ಬೆಳೆಸೋಣ" ಎಂದು ನುಡಿದರು. ನಂತರ ಕೊಂಡೆವೂರಿನ ಪರಮಪೂಜ್ಯರು ಯಾಗ ಸಂದರ್ಭದಲ್ಲಿ ಕಾರ್ಯಕರ್ತರ ವಿಭಾಗ ಜವಾಬ್ದಾರಿಗಳು ಅವರು ನಿರ್ವಹಿಸಬೇಕಾದ ಕೆಲಸಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಾ " ಇದೊಂದು ನಮಗೆ ಸಿಕ್ಕಂತಹ ಮಹದವಕಾಶ, ಇದನ್ನು ಚೆನ್ನಾಗಿ ಬಳಸಿ ಲೋಕಶಾಂತಿಗೆ ನಾವೆಲ್ಲ ಶ್ರಮಿಸೋಣ" ಎಂದರು.
ವೇದಿಕೆಯಲ್ಲಿ ಯಾಗ ಪ್ರಧಾನ ಸಮಿತಿಯ ಕಾರ್ಯಾಧ್ಯಕ್ಷ ಡಾ.|ಶ್ರೀಧರ ಭಟ್ ಉಪ್ಪಳ, ಮಹಿಳಾ ಪ್ರಧಾನ ಸಮಿತಿಯ ಅಧ್ಯP.É್ಷ ಡಾ ಆಶಾಜ್ಯೋತಿ ರೈ, ಯಾಗ ಪ್ರಧಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಚೆರುಗೋಳಿ, ಕೋಶಾಧ್ಯಕ್ಷ ಶಶಿಧರ ಶೆಟ್ಟಿ ಗ್ರಾಮಚಾವಡಿ ಶಿರಿಯ, ಮತ್ತು ಯಾಗ ಪ್ರಚಾರ ಸಮಿತಿಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಉಪಸ್ಥಿತರಿದ್ದರು. ಡಾ. ಆಶಾಜ್ಯೋತಿ ರೈ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಯಾಗ ಪ್ರಧಾನ ಸಮಿತಿಯ ಕಾರ್ಯಾಧ್ಯಕ್ಷ ಮೋನಪ್ಪ ಭಂಡಾರಿ ಉಪಸ್ಥಿತರಿದ್ದÀರು. ರಾಮಚಂದ್ರ ಚೆರುಗೋಳಿ ಸ್ವಾಗತಿಸಿ, ಅರವಿಂದಾಕ್ಷ ಭಂಡಾರಿ ವಂದಿಸಿದರು. ನ್ಯಾಯವಾದಿ. ಗಂಗಾಧರ ಕೊಂಡೆವೂರು ನಿರೂಪಣೆಗೈದರು.