ಕಾಸರಗೋಡು: ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ಕೆ.ಎಸ್.ಟಿ.ಎ)ಕಾಸರಗೋಡು ತಾಲೂಕು ಕನ್ವೆನ್ಶನ್ ಜ.18ರಂದು ಶುಕ್ರವಾರ ಕಾಸರಗೋಡು ಸ್ಪೀಡ್ ವೇ ಆಡಿಟೋರಿಯಂನಲ್ಲಿ ನಡೆಯಲಿರುವುದು.
ಕೆ.ಎಸ್.ಟಿ.ಎ. ಕಾಸರಗೋಡು ತಾಲೂಕು ಅಧ್ಯಕ್ಷ ಕೆ.ಜಿ.ತಾರಾನಾಥ್ ಶಿವಶಕ್ತಿ ಅಧ್ಯಕ್ಷತೆಯಲ್ಲಿ ರಾಜ್ಯ ಸಮಿತಿ ಅಧ್ಯಕ್ಷ ರಾಮನ್ ಚೆನ್ನಿಕ್ಕೆರೆ ಕನ್ವೆನ್ಶನ್‍ನ್ನು ಉದ್ಘಾಟಿಸಲಿರುವರು. ಕೆ.ಎಸ್.ಟಿ.ಎ. ರಾಜ್ಯ ಸಮಿತಿ ಸದಸ್ಯರುಗಳಾದ ಪಿ.ಯು.ಶಂಕರನ್, ಬಾಲಕೃಷ್ಣ ಕರಿಪ್ಪಾರ್, ಕೆ.ಶಂಕರನ್ ಅಣಂಗೂರು, ಕಾಸರಗೋಡು ನಗರಸಭೆ ಸದಸ್ಯ ದಿನೇಶನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಮುಖ್ಯ ಭಾಷಣಕಾರರಾಗಿ ಕೆ.ಎಸ್.ಟಿ.ಎ.ಜಿಲ್ಲಾಸಮಿತಿ ಅಧ್ಯಕ್ಷ ಎ.ಮೋಹನ್‍ದಾಸ್ ಕುಂಬಳೆ ಹಾಗೂ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಮುಕುಂದನ್ ಭಾಗವಹಿಸುವರು. ಕೆ.ಎಸ್.ಟಿ.ಎ. ಕಾಸರಗೋಡು ತಾಲೂಕು ಪ್ರಧಾನ ಕಾರ್ಯದರ್ಶಿ ದಿನೇಶ ಕುಳಮರ್ವ ವರದಿ ಮಂಡಿಸಲಿದ್ದಾರೆ. ಉದಯನ್ ಬಡಾಸಾಬ್, ಎಸ್.ರಾಧಾಕೃಷ್ಣ ಸರಳಿ, ಎ.ನಾರಾಯಣನ್, ಪುರುಷೋತ್ತಮನ್ ತಲಕ್ಲಾಯಿ, ಪುಷ್ಪವಲ್ಲಿ ಎ.ಡಿ. ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಯಶಸ್ಸಿಗಾಗಿ ಕಾಸರಗೋಡು ಜಿಲ್ಲಾ ಸಮಿತಿ ಕರೆನೀಡಿದೆ.