ಬದಿಯಡ್ಕ: ಅಧ್ಯಾಪಕ ಸಮಾಜದ ಆಗುಹೋಗುಗಳಿಗೆ ಸ್ಪಂದಿಸಿದಾಗ ಗಳಿಸುವ ಜೀವನಾನುಭವ ಅನನ್ಯವಾದದ್ದು. ಸಾಧನೆಗೆ ಮಿತಿಯೆಂಬುದಿಲ್ಲ. ಮಗುವಿನ ಸರ್ವಾಂಗೀಣ ಏಳಿಗೆ ಅಧ್ಯಾಪಕನ ಧ್ಯೇಯವಾಗಿರಬೇಕು ಎಂದು ಕೇರಳ ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಿರ್ಮಲಕುಮಾರ್ ನುಡಿದರು.
ಪೆರಡಾಲ ಸರಕಾರಿ ಪ್ರೌಢಶಾಲಾ ವತಿಯಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.
ಅಧ್ಯಾಪನ ಆರಂಭಕಾಲದ ಪೆರಡಾಲ ಶಾಲಾ ಶಿಕ್ಷಕನಾಗಿ ಗಳಿಸಿದ ಅನುಭವಗಳು, ಆಗಿನ ಅಧ್ಯಾಪಕರ ಮಾರ್ಗದರ್ಶನ ತನ್ನಲ್ಲಿ ಬೀರಿದ ಪ್ರಭಾವಗಳನ್ನು ಸ್ಮರಿಸಿದರು. ಶಾಲಾ ಮುಖ್ಯಶಿಕ್ಷಕ ರಾಜಗೋಪಾಲ ಶಾಲಾ ವತಿಯಿಂದ ಸ್ಮರಣಿಕೆಯಿತ್ತು ಅಭಿನಂದಿಸಿದರು. ಶ್ರೀಧರನ್, ಪ್ರಮೋದ ಕುಮಾರ್, ರಿಶಾದ್ ,ಚಂದ್ರಾವತಿ, ಗೋಪಾಲಕೃಷ್ಣ ಭಟ್, ಪ್ರಸೀತಾ ಕುಮಾರಿ ಶುಭಾಶಂಶನೆಗೈದರು. ಜಯಲತಾ, ಸುಹೈಲ್ ,ಚಂದ್ರಶೇಖರ ಸಹಕರಿಸಿದರು. ಶಾಲಾ ಸಿಬಂದಿ ಸಂಘ ಕಾರ್ಯದರ್ಶಿ ಚಂದ್ರಹಾಸ ನಂಬಿಯಾರ್ ಸ್ವಾಗತಿಸಿ, ಶಾಲಾ ಸಂಪನ್ಮೂಲ ಸಂಘ ಸಂಚಾಲಕ ಶ್ರೀಧರ ಭಟ್ ವಂದಿಸಿದರು.