ಬದಿಯಡ್ಕ: ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ಜಿಲ್ಲಾ 12ನೇಸಾಹಿತ್ಯ ಸಮ್ಮೇಳನದೆರಡನೇ ದಿನ ನಿನ್ನೆ ಮಧ್ಯಾಹ್ನ ವೇದಿಕೆಯಲ್ಲಿ ಪ್ರಸ್ತುತಗೊಂಡ ಕಾವ್ಯ ಸೌರಭಕ್ಕೆ ಹಸುವೊಂದು ಆಗಮಿಸಿ ಆಶ್ಚರ್ಯಗೊಳಿಸಿತು.
ಡಾ.ಶಶಿರಾಜ ನೀಲಂಗಳ ಅವರಿಂದ ಪಾದುಕಾ ಪ್ರಧಾನ ಕಥಾ ಭಾಗದ ಗಮಕ ಸೌರಭ ಪ್ರಸ್ತುತಗೊಳ್ಳುತ್ತಿತ್ತು. ಜಯಶ್ರೀ ಕಾರಂತ ಮಂಗಲ್ಪಾಡಿ ಅವರು ವ್ಯಾಖ್ಯಾನಕಾರರಾಗಿದ್ದರು. ಈ ವೇಳೆ ಹಸುವೊಂದು ವೇದಿಕೆಯತ್ತ ದಾಪುಗಾಲಿಡುತ್ತಾ ಆಗಮಿಸಿ ವೇದಿಕೆಯ ಮುಂಭಾಗದಲ್ಲಿ ಗಮಕ ಆಲಿಸುವಿಕೆಯಲ್ಲಿ ನಿರತವಾಗಿರುವುದು ಆಶ್ಚರ್ಯಕ್ಕೆ ಕಾರಣವಾಯಿತು. ಬಳಿಕ ಕೆಲವರು ಹಸುವನ್ನು ಅಲ್ಲಿಂದ ಹಿಂತೆರಳಲು ಹವಣಿಸಿದರು. ಬಳಿಕ ಹಸು ನಿಧಾನವಾಗಿ ಒಲ್ಲದ ಮನಸ್ಸಿನಿಂದ ಹೊರ ನಡೆಯಿತು.